RNI NO. KARKAN/2006/27779|Sunday, August 3, 2025
You are here: Home » breaking news » ಘಟಪ್ರಭಾ:ಶ್ರಾವಣ ಮಾಸದ ಚಿಂತನ ಗೋಷ್ಠಿ

ಘಟಪ್ರಭಾ:ಶ್ರಾವಣ ಮಾಸದ ಚಿಂತನ ಗೋಷ್ಠಿ 

ಶ್ರಾವಣ ಮಾಸದ ಚಿಂತನ ಗೋಷ್ಠಿ

ಘಟಪ್ರಭಾ ಅ 10 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿ.ಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಪ್ರತಿ ಅಮವಾಸ್ಯೆಗೊಮ್ಮೆ ಜರಗುವ ಶ್ರಾವಣ ಮಾಸದ ಮಾಸಿಕ ಚಿಂತನ ಗೋಷ್ಠಿಯ 96ನೇ ಮಾಸಿಕ ಸುವಿಚಾರ ಚಿಂತನ ಗೋಷ್ಠಿ, ಶ್ರೀಗಳ ಕಿರೀಟ ಪೂಜಾ ಸಮಾರಂಭವು ದಿ.11 ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರು ವಹಿಸುವರು. ಅಧ್ಯಕ್ಷತೆಯನ್ನು ಗೊರಗುದ್ದಿ ಗ್ರಾಮದ ಶ್ರೀ ಸಿದ್ಧಾರೂಢಮಠದ ಶ್ರೀ ತುಕಾರಾಮ ಮಹಾರಾಜರು ವಹಿಸುವರು.
ಪ್ರಕಾಶ ಹೂಗಾರ ಇವರಿಂದ ಅನ್ನದಾಸೋಹ ಜರುಗಲಿದೆ. ಹಣಮಂತ ದಾಸರ, ಹಣಮಂತ ಪಾದಗಟ್ಟಿ, ಗಂಗಾಧರ ಹೊಳಿಹೊಸೂರ ಇವರಿಂದ ಸಂಗೀತ ಸೇವೆ ಜರುಗಲಿದೆ. ಶ್ರೀ ಸಿದ್ಧಲಿಂಗೇಶ್ವರ ಶಾಲಾ ಮಕ್ಕಳಿಂದ ವಿವಿಧ ಮನರಂಜನೆ ಕಾರ್ಯಕ್ರಮ ಜರುಗಲಿದೆ.

Related posts: