ಗೋಕಾಕ:ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ: ಅಶೋಕ ಲಗಮಪ್ಪಗೋಳ

ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ: ಅಶೋಕ ಲಗಮಪ್ಪಗೋಳ
ಗೋಕಾಕ ಜು 23 : ಬಡ ವಿದ್ಯಾರ್ಥಿಗಳಿಗೆ ಸರಕಾರದಿಂದ ವಿವಿಧ ಸೌಲಭ್ಯಗಳನ್ನ್ಯುನುಷ್ಠಾನಗೊಳಿಸಿದ್ದು ವಿದ್ಯಾರ್ಥಿಗಳು ಅವುಗಳ ಸದುಪಯೋಗಪಡಿಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಸತ್ಯಮೇವ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ಅಶೋಕ ಲಗಮಪ್ಪಗೋಳ ಹೇಳಿದರು.
ಅವರು, ನಗರದ ಬಸವಜ್ಯೋತಿ ಐಟಿಐ ಕಾಲೇಜಿನ 2016-18ನೇ ಸಾಲಿನ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಹಾಗೂ ಉಚಿತ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಿಇ ಇಂಜನೀಯರಿಂಗ ಕೋರ್ಸಗಳಿಗೆ ಹೆಚ್ಚಿನ ಒತ್ತು ನೀಡುವದನ್ನು ಬಿಟ್ಟು ಹೆಚ್ಚಿನ ಲಾಭ ನೀಡುವ ಐಟಿಐ ಪ್ರವೇಶ ಪಡೆದು ತಮ್ಮ ಉತ್ತಮವಾದ ಜೀವನ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸರಕಾರದಿಂದ ಕೋಡಮಾಡುವ ಉಚಿತ ಲ್ಯಾಪ್ ಟಾಪ್‍ಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಪರಟ್ಟಿ ಮಹಾದೇವಾಶ್ರಮದ ಬಸವರಾಜ ಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಸಾಹಿತಿ ಮಹಾಲಿಂಗ ಮಂಗಿ, ನಗರಸಭೆ ಸದಸ್ಯ ಭೀಮಶಿ ಭರಮನ್ನವರ, ಮುಖಂಡರಾದ ದುರ್ಗಪ್ಪ ಶಾಸ್ತ್ರಿಗೊಲ್ಲರ, ಕೆಂಪಣ್ಣ ಶಿಂಗಳಾಪೂರ, ಎಮ್ ಬಿ ಕಂಬಾರ ಉಪಸ್ಥಿತರಿದ್ದರು.