RNI NO. KARKAN/2006/27779|Saturday, August 2, 2025
You are here: Home » breaking news » ಬೆಳಗಾವಿ:ಆಶ್ರಯ ಮನೆ ಹಂಚಿಕೆಯಲ್ಲಿ ಭಾರಿ ಗೋಲಮಾಲ ತುಕ್ಕಾನಟ್ಟಿ ಗ್ರಾಮಸ್ಥರಿಂದ ಬೆಳಗಾವಿಯಲ್ಲಿ ಪ್ರತಿಭಟನೆ

ಬೆಳಗಾವಿ:ಆಶ್ರಯ ಮನೆ ಹಂಚಿಕೆಯಲ್ಲಿ ಭಾರಿ ಗೋಲಮಾಲ ತುಕ್ಕಾನಟ್ಟಿ ಗ್ರಾಮಸ್ಥರಿಂದ ಬೆಳಗಾವಿಯಲ್ಲಿ ಪ್ರತಿಭಟನೆ 

ಆಶ್ರಯ ಮನೆ ಹಂಚಿಕೆಯಲ್ಲಿ ಭಾರಿ ಗೋಲಮಾಲ ತುಕ್ಕಾನಟ್ಟಿ ಗ್ರಾಮಸ್ಥರಿಂದ ಬೆಳಗಾವಿಯಲ್ಲಿ ಪ್ರತಿಭಟನೆ
ಬೆಳಗಾವಿ ಜು 4 : ಆಶ್ರಯ ಮನೆ ಹಂಚಿಕೆಯಲ್ಲಿ ಗೋಲಮಾಲ ನಡೆದಿದೆ ಎಂದು ಆರೋಪಿಸಿ ಗೋಕಾಕ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಗ್ರಾಮಸ್ಥರು ಬುಧವಾರದಂದು ಬೆಳಗಾವಿಯ ಡಿಸಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು
ಕಳೆದ ತಿಂಗಳು ತುಕ್ಕಾನಟ್ಟಿ ಗ್ರಾಪಂನಲ್ಲಿ ನಡೆದ  ಸಭೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದ್ದು, ಬೇಕಾಬಿಟ್ಟಿಯಾಗಿ ಆಶ್ರಯ ಮನೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.  ಆಯ್ಕೆಯಲ್ಲಿ ಅಕ್ರಮ ನಡೆದಿರುವುದರಿಂದ ಈ ಪಟ್ಟಿಯನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿ ಆರ್​ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಅಧಿಕಾರಿಗಳು ತಮಗೆ ಬೇಕಾದವರಿಗೆ ಮಾತ್ರ ಆಶ್ರಯ‌ ಮನೆ ಹಂಚಿಕೆ‌ ಮಾಡಿದ್ದಾರೆ.  ಬಡತನ‌ ರೇಖೆಗಿಂತ ಕೆಳಗಿರುವವರು ‌ ನಾಲ್ಕೈದು ಸಲ ಅರ್ಜಿ ಸಲ್ಲಿಸಿದರೂ ಪರಿಗಣಿಸಿಲ್ಲ. ಅರ್ಹರನ್ನು ಪಟ್ಟಿಯಿಂದ ಕೈಬಿಡಲಾಗಿದೆ.  ಎಕರೆಗಟ್ಟಲೆ ಜಮೀನು ಹೊಂದಿದವರಿಂದ 30 ಸಾವಿರ  ಲಂಚ ಪಡೆದು, ಆಶ್ರಯ ಮನೆ ಹಂಚಿಕೆ ಮಾಡಲಾಗಿದೆ. ಅಲ್ಲದೆ ಓರ್ವ ವಿದ್ಯಾರ್ಥಿಗೂ ಆಶ್ರಯ ಮನೆ ಹಂಚಿಕೆ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಈ ಬಗ್ಗೆ  ಕೂಡಲೆ ಕ್ರಮ‌ ಕೈಗೊಳ್ಳುವಂತೆ  ಒತ್ತಾಯಿಸಿದರು.

Related posts: