RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಎ ಆರ್ ಟಿ ಓ ಕಛೇರಿ ಸ್ಥಳಾಂತರಕ್ಕೆ ವಿರೋಧ

ಗೋಕಾಕ:ಎ ಆರ್ ಟಿ ಓ ಕಛೇರಿ ಸ್ಥಳಾಂತರಕ್ಕೆ ವಿರೋಧ 

ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ(ಆರ್‍ಟಿಓ) ಕಚೇರಿಯನ್ನು ಬೇರೆಡೆ ಸ್ಥಳಾಂತರಿಸುವದನ್ನು ವಿರೋಧಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ಕಾರ್ಯಕರ್ತರು ಮಂಗಳವಾರದಂದು ನಗರದ ಹೊರವಲಯದ ನಾಕಾ ನಂ1 ರ ಬಳಿಯಿರುವ ಆರ್‍ಟಿಓ ಕಚೇರಿಯನ್ನು ಬಂದ ಮಾಡಿ, ಪ್ರತಿಭಟನೆ ನಡೆಸಿ ಆರ್‍ಟಿಓ ಅಧಿಕಾರಿಗೆ ಮನವಿ ಸಲ್ಲಿಸಿದರು.

ಎ ಆರ್ ಟಿ ಓ ಕಛೇರಿ ಸ್ಥಳಾಂತರಕ್ಕೆ ವಿರೋಧ

ಗೋಕಾಕ ಜೂ 26 : ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ(ಆರ್‍ಟಿಓ) ಕಚೇರಿಯನ್ನು ಬೇರೆಡೆ ಸ್ಥಳಾಂತರಿಸುವದನ್ನು ವಿರೋಧಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ಕಾರ್ಯಕರ್ತರು ಮಂಗಳವಾರದಂದು ನಗರದ ಹೊರವಲಯದ ನಾಕಾ ನಂ 1 ಬಳಿಯಿರುವ ಆರ್‍ಟಿಓ ಕಚೇರಿಯನ್ನು ಬಂದ ಮಾಡಿ, ಪ್ರತಿಭಟನೆ ನಡೆಸಿ ಆರ್‍ಟಿಓ ಅಧಿಕಾರಿಗೆ ಮನವಿ ಸಲ್ಲಿಸಿದರು.
ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಕರವಾಗಿದ್ದು ಕಚೇರಿಯ ಸ್ಥಳಾಂತರದಿಂದ ಬಹಳಷ್ಟು ತೊಂದರೆಯಾಗುತ್ತದೆ. ಈಗಾಗಲೇ ಕಾರ್ಯವನ್ನು ನಿರ್ವಹಿಸುತ್ತಿರುವ ಕಚೇರಿ ಬಾಡಿಗೆ ಕೇವಲ 38 ಸಾವಿರ ಇದ್ದು ಈಗ ಪಡೆಯಲು ಹೊರಟಿರುವ ಸ್ಥಳದ ಬಾಡಿಗೆ 1.25 ಲಕ್ಷ ರೂಗಳನ್ನು ಹೊಂದಿದ್ದು ಇದರಿಂದದಾಗಿ ಸರ್ಕಾರದ ಹಣ ವ್ಯರ್ಥವಾಗುವುದಕ್ಕೆ ವಿರೋಧಿಸಿದ ಅವರು, ಆರ್‍ಟಿಓ ಕಚೇರಿ ನಿರ್ಮಾಣಕ್ಕಾಗಿ ಈಗಾಗಲೇ ಅರಭಾಂವಿ ಹತ್ತಿರ ಸರ್ಕಾರದಿಂದ 8 ಎಕರೆಯಷ್ಟು ಜಮೀನು ಮಂಜೂರಾಗಿದ್ದು ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುವವರೆಗೂ ಇಲ್ಲಿಯ ಕಚೇರಿಯನ್ನು ಸ್ಥಳಾಂತರಿಸಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗಣಪತಿ ಈಳಿಗೇರ, ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ಮಹಾದೇವ ಗುಡೇರ, ಮುತ್ತೆಪ್ಪ ಕುರಬರ, ದೇವೆಂದ್ರ ಮಕ್ಸಾರ, ಮಹಾಂತೇಶ ರಡರಟ್ಟಿ, ಬಸವರಾಜ ಮ್ಯಾಕನ್ನವರ, ಸಿದ್ದಲಿಂಗ ಪೂಜೇರಿ, ದೀಪಕ ಗದಾಡಿ, ಗೋಪಾಲ ಕಸ್ತೂರಿ, ಪರಸಪ್ಪ ಗದಾಡಿ, ಅಶೋಕ ಮಡಿವಾಳರ, ಶಿವಾನಂದ ಈಳಿಗೇರ, ಪ್ರಕಾಶ ಹಾಲನ್ನವರ, ಕುಮಾರ ತಿಗಡಿ, ಮಲ್ಲಿಕಾರ್ಜುನ ಈಳಿಗೇರ, ಮಂಜುನಾಥ ಝಲ್ಲಿ, ಸಂಗೀತಾ ಕದಮ್ ಮುತ್ತವ್ವ ಬಾಣಸಿ, ಸುಶೀಲವ್ವ ನಡಟ್ಟಿ, ಯಮನವ್ವ ಹಿಡಕಲ್ ಮಹಾನಂದಾ ಹಿರೇಮಠ, ನಿರ್ಮಲಾ ಕುರಬೇಟ, ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತೆಯರು ಇದ್ದರು.

Related posts: