RNI NO. KARKAN/2006/27779|Saturday, October 10, 2026
You are here: Home » breaking news » ಘಟಪ್ರಭಾ : ಭಾವೈಕ್ಯೆತೆ ಮನೋಭಾವ ಬೆಳೆಸಿಕೊಳ್ಳಿ : ಇಫ್ತಯಾರ್ ಕೂಟದಲ್ಲಿ ರಾಮಣ್ಣಾ ಹುಕ್ಕೇರಿ ಕರೆ

ಘಟಪ್ರಭಾ : ಭಾವೈಕ್ಯೆತೆ ಮನೋಭಾವ ಬೆಳೆಸಿಕೊಳ್ಳಿ : ಇಫ್ತಯಾರ್ ಕೂಟದಲ್ಲಿ ರಾಮಣ್ಣಾ ಹುಕ್ಕೇರಿ ಕರೆ 

ಭಾವೈಕ್ಯೆತೆ ಮನೋಭಾವ ಬೆಳೆಸಿಕೊಳ್ಳಿ : ಇಫ್ತಯಾರ್ ಕೂಟದಲ್ಲಿ ರಾಮಣ್ಣಾ ಹುಕ್ಕೇರಿ ಕರೆ
ಘಟಪ್ರಭಾ ಜೂ 5 : ಭಾವೈಕ್ಯೆತೆಯಿಂದ ಜೀವನ ಸಾಗಿಸಿದರೆ ಬದುಕು ಪಾವನವಾಗಲು ಸಾದ್ಯ ಎಂದು ಕೆ.ಆರ್.ಎಚ್ ಶಾಲೆಯ ಅಧ್ಯಕ್ಷ ರಾಮಣ್ಣಾ ಹುಕ್ಕೇರಿ ಹೇಳಿದರು

ಮಂಗಳವಾರದಂದು ಸಾಯಂಕಾಲ ಪಟ್ಟಣದ ಹಜರತ್ ಬಿಲಾಲ ಸೋಷಿಯಲ್ ವೆಲ್ಲಫೆರ್ ವತಿಯಿಂದ ಬಿಲಾಲ ಮಸಜೀದನಲ್ಲಿ ಆಯೋಜಿಸಿದ್ದ ಇಫ್ತಯಾರ್ ಕೂಟದಲ್ಲಿ ಬಾಗವಹಿಸಿ ಅವರು ಮಾತನಾಡಿದರು

ಮೇಲು ಕೀಳು ಎನ್ನದೆ ಪ್ರತಿಯೊಬ್ಬರು ಸಹೋದರತ್ವದಿಂದ ಬಾಳಿ ಮನುಕೂಲವನ್ನು ಎತ್ತಿ ಕಟ್ಟಬೇಕಾಗಿದೆ ಆ ದಿಸೆಯಲ್ಲಿ ಎಲ್ಲರೂ ಒಗ್ಗಟಾಬೇಕೆಂದು ಕರೆ ನೀಡಿದರು

ಈ ಸಂದರ್ಭದಲ್ಲಿ ಮೌಲಾನಾ ತೋಹಿದ್ಅಹ್ಮದ ರಶಾದಿ , ಧೂಪದಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಬೆನವಾಡೆ ಸರ್ , ಹಿರಿಯರಾದ ಸುರೇಶ ಪಾಟೀಲ , ಪ್ರಕಾಶ ಡಾಂಗೆ , ಗಣೇಶ ಗಾಣಿಗ , ವಿರೇಂದ್ರ ಪಟ್ಟಣಶೆಟ್ಟಿ , ಜಿ.ಎಸ್ ಹುನಗುಂದ , ನಾಗರಾಜ ನಾಯಿಕ , ಮುನ್ನಾ ಸೌದಾಗರ , ಯೂನೂಸ ಶೇಖ , ಅಲ್ತಾಪ ಉಸ್ತಾದ , ಶಂಕರ ಪರಿಟ , ಹಾಜಿ ಹಜರತ್ ಸೇರಿದಂತೆ ಅನೇಕರು ಇದ್ದರು

Related posts: