ಗೋಕಾಕ:ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾರಾಜಿಸುತ್ತಿವೆ ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗಮಾಡಿದ ಮಹಾನ್ ಪುರುಷರ್ ಭಾವಚಿತ್ರಗಳು

ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾರಾಜಿಸುತ್ತಿವೆ ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗಮಾಡಿದ ಮಹಾನ್ ಪುರುಷರ್ ಭಾವಚಿತ್ರಗಳು
ವಿಶೇಷ ವರದಿ : ಅಡಿವೇಶ ಮುಧೋಳ
ಬೆಟಗೇರಿ ಮೇ 29 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಮುಂಭಾಗದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ವೀಣಾಧಾರೆ ಸರಸ್ವತಿ ಮೂರ್ತಿ ಹಾಗೂ ಭಾರತ ದೇಶದ ನಕ್ಷೆಯಲ್ಲಿ ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗಮಾಡಿದ ಮಹಾನ್ ಪುರುಷರ್ ಭಾವಚಿತ್ರಗಳು ಅತ್ಯಂತ ಆಕರ್ಷಣೀಯವಾಗಿ ಜನಮನ ಸೆಳೆಯುತ್ತಿವೆ.
ಶಾಲೆಯ ಆವರಣದಲ್ಲಿ ನಿರ್ಮಿಸಿದ ಪ್ರಾಣಿ, ಪಕ್ಷಿ, ಮಹಾನ್ ಪುರುಷರ ಹಾಗೂ ನಾಡಿನ ಹಿರಿಯ ಸಾಹಿತಿಗಳ, ಗಿಡ, ಮರಗಳಿಂದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಉದ್ಯಾನವನ, ವಿಶಾಲವಾದ ಆಟದಂಗಳ, ರಂಗ ವೇದಿಕೆ, ಭವ್ಯ ಕಟ್ಟಡಗಳ ಶಾಲಾ ಕೊಠಡಿಗಳು ಸೇರಿದಂತೆ ಶಾಲೆಯ ಶೈಕ್ಷಣಿಕ ಗುಣಮಟ್ಟದ ವೀಕ್ಷಿಸಲು ಬೆಳಗಾವಿ ಜಿಲ್ಲೆ ಸೇರಿದಂತೆ ಸಮೀಪದ ವಿವಿಧ ಜಿಲ್ಲೆಯ ಹಲವಾರು ಹಳ್ಳಿಗಳಿಂದ ನಿತ್ಯ ಹಲವಾರು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಊರವರ ಸಹಾಯ, ಸಹಕಾರ, ಶಿಕ್ಷಕರ ನಿಸ್ವಾರ್ಥ ಸೇವೆ ಸೇರಿದರೆ ಏನೆಲ್ಲಾ ಸಾಧ್ಯ ಅಂಬುದಕ್ಕೆ ಇಲ್ಲಿಯ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯು ಒಂದು ಸ್ಪಷ್ಟ ನಿರ್ದೇಶನವಾಗಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಸದಾ ಮುಂದು ಅಂಬುವುದಕ್ಕೆ ಮೂಡಲಗಿ ಶ್ಯೆಕ್ಷಣಿಕ ವಲಯದಲ್ಲಿಯೇ ಈಗಾಗಲೇ ಸಾಕಷ್ಟು ಉದಾಹರಣೆಗಳಿವೆ.
ಗ್ರಾಮದ ಶಿಕ್ಷಣ ಪ್ರೇಮಿಗಳ, ಸ್ಥಳೀಯರ ಸಹಾಯ, ಸಹಕಾರ, ನಿಸ್ವಾರ್ಥ ಸೇವೆ ಮತ್ತು ಶಾಲೆಯ ಮುಖ್ಯಾಧ್ಯಾಪಕ, ಶಿಕ್ಷಕವೃಂದದವರ ಹಗಲಿರುಳು ಸಲ್ಲಿಸುತ್ತಿರುವ ಸತತ ಪರಿಶ್ರಮದ ಕಾಯಕದಿಂದ ಇಂದು ಮಲೆನಾಡ ಗಾಂಧಿ ಎಚ್.ಜಿ.ಗೋವಿಂದೇಗೌಡ ಹೆಸರಿನಲ್ಲಿ ನೀಡುವ ಸನ್ 2007-08 ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಸರ್ಕಾರಿ ಪ್ರೌಢ ಶಾಲೆ ಪ್ರಶಸ್ತಿ ರಾಜ್ಯ, ಜಿಲ್ಲೆಯಲ್ಲಿಯೇ ಮಾದರಿ ಸರ್ಕಾರಿ ಪ್ರೌಢ ಶಾಲೆಯಾಗಿ ಹೊರಹೊಮ್ಮಿದೆ ಎಂದು ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ಹೇಳುವ ಮಾತಿದು.
“ ರಾಷ್ಟ್ರ ಮಟ್ಟದಲ್ಲಿ ನಮ್ಮೂರಿನ ಈ ಸರ್ಕಾರಿ ಪ್ರೌಢ ಶಾಲೆ ಗುರುತಿಸಿಕೊಳ್ಳಲು ಬೇಕಾದ ಹಲವಾರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸ್ಥಳೀಯರು ಸಹಾಯ, ಸಹಕಾರ ನೀಡುತ್ತೇವೆ.”
* ಮಲ್ಲಿಕಾರ್ಜುನ ನೀಲಣ್ಣವರ. ಶಿಕ್ಷಣಪ್ರೇಮಿ ಬೆಟಗೇರಿ, ತಾ. ಗೋಕಾಕ.