ಗೋಕಾಕ:ತಂದೆ-ತಾಯಿಯ ಪಾಲನೆ ಮಾಡುವುದರಲ್ಲಿ ಸಿಗುವ ಸುಖವು ಬೇರೆ ಎಲ್ಲಿಯೂ ಸಿಗಲಾರದು : ಶ್ರೀ ನಾರಾಯಣ ಶರಣರು

ತಂದೆ-ತಾಯಿಯ ಪಾಲನೆ ಮಾಡುವುದರಲ್ಲಿ ಸಿಗುವ ಸುಖವು ಬೇರೆ ಎಲ್ಲಿಯೂ ಸಿಗಲಾರದು : ಶ್ರೀ ನಾರಾಯಣ ಶರಣರು
ಗೋಕಾಕ ಮೇ 28 : ಪುಣ್ಯ ಸಂಪಾದಿಸಲು ತೀರ್ಥಯಾತ್ರೆಗಳನ್ನು ಮಾಡುವುದಕ್ಕಿಂತ ವೃದ್ದಾಪದಲ್ಲಿರುವ ತಂದೆ-ತಾಯಿಯ ಪಾಲನೆ ಮಾಡುವುದರಲ್ಲಿ ಸಿಗುವ ಸುಖವು ಬೇರೆ ಎಲ್ಲಿಯೂ ಸಿಗಲಾರದು ಎಂದು ವಡೇರಹಟ್ಟಿ ಅಂಬಾ ದರ್ಶನ ಪೀಠದ ಪೀಠಾಧಿಪತಿ ಶ್ರೀ ನಾರಾಯಣ ಶರಣರು ಹೇಳಿದರು.
ರವಿವಾರದಂದು ರಾತ್ರಿ ನಗರ ಸಭೆಯ ಸಮುದಾಯ ಭವನದಲ್ಲಿ ಇಲ್ಲಿಯ ಜೆಸಿಐ ಸಂಸ್ಥೆಯವರು ಹಮ್ಮಿಕೊಂಡ ವಿಶ್ವ ಕಾರ್ಮಿಕರ ಹಾಗೂ ತಾಯಂದಿರ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಚಿಕ್ಕ ಮಕ್ಕಳಾಗಿರುವಾಗ ಹೆಜ್ಜೆಯನ್ನಿಡುವುದರೊಂದಿಗೆ ಮಕ್ಕಳು ಮಾಡುವ ತಪ್ಪನ್ನು ತಿದ್ದಿ ತಿಡಿ ಸಮಾಜದಲ್ಲಿ ಹೇಗೆ ಬದುಕಬೇಕೆಂದು ಕಲಿಸುವ ತಂದೆ-ತಾಯಿಯನ್ನು ಕಡೆಗಣಿಸದೇ ಅವರ ಪಾಲನೆ ಪೋಷಣೆಯನ್ನು ಮಾಡುವ ಮೂಲಕ ಜೀವಂತವಿರುವ ದೇವರನ್ನು ಪೂಜಿಸಿ, ತಾಯಿ ಕರುಣಾಮಯಿಯಾಗಿದ್ದು ಅವಳನ್ನು ಸಂತುಷ್ಟಳಾಗಿ ಜೀವನದಲ್ಲಿ ಕಾಣುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯವಾಗಿದೆ ಎಂದು ತಿಳಿಸಿದರಲ್ಲದೇ ದುಡಿಯುವ ಕೈಗಳು ಕಾಯಕ ಶ್ರಮಜೀವಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಹಾಗೂ ಇಂದಿನ ಅವ್ಯವಸ್ಥೆಯಿಂದಾಗಿ ಸಮಾಜವನ್ನು ಒಡೆದು ಹೋರಾಟ ಮಾಡುತ್ತಿರುವ ಸಂಘ ಸಂಸ್ಥೆಗಳೇ ಹೆಚ್ಚಿಗೆ ಇರುವ ಇಂದಿನ ದಿನಗಳಲ್ಲಿ ಸಮಾಜವನ್ನು ಒಗ್ಗೊಡಿಸುವ ಕಾರ್ಯವನ್ನು ಮಾಡುತ್ತಿರುವ ಜೆಸಿಐ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನಂತರ ತಾಯಂದಿರ ಪಾದಪೂಜೆ ಮಾಡುವ ಮೂಲಕ ಗೌರವಿಸಲಾಯಿತು. ಜೆಸಿಐ ಸಂಸ್ಥೆಯ ಪದಾಧಿಕಾರಿ ದಂಪತಿಗಳ ಮದುವೆ ವಾರ್ಷಿಕೋತ್ಸವ ನಿಮಿತ್ಯ ದಂಪತಿಗಳನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸಂಸ್ಥೆಯ ಅಧ್ಯಕ್ಷ ಗುರುರಾಜ ನಿಡೋಣಿ ವಹಿಸಿದ್ದರು. ಈ ಸಂದರ್ಭದಲ್ಲಿ ಕೆಎಲ್‍ಇ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಅನುಪಾ ಕೌಶಿಕ, ವಿಷ್ಣು ಲಾತೂರ, ಸುಧಾ ನಿಡೋಣಿ, ಕೆಂಪಣ್ಣಾ ಚಿಂಚಲಿ, ವಿಜಯಕುಮಾರ ಖಾರೇಪಠಾಣ, ಮಹಾವೀರ ಖಾರೇಪಠಾಣ, ವಿ.ಎಸ್.ತಡಸಲೂರ, ಸಯೀಲ ಮಸ್ತಿ, ಧನ್ಯಕುಮಾರ ಕಿತ್ತೂರ, ರಾಚಪ್ಪ ಅಮ್ಮಣಗಿ, ನೇತ್ರಾವತಿ ಲಾತೂರ, ಭಾರತಿ ಕೊಳವಿ, ಭಾಗೀರಥಿ ನಂದಗಾಂವಿ, ಕೃಷ್ಣಾ ಕುರುಬಗಟ್ಟಿ, ಪಿ.ಎಚ್.ಗಂಗನ್ನವರ, ಜಗದೀಶ ಹಂದಿಗುಂದ, ಮೀನಾಕ್ಷಿ ಸವದಿ, ರಜನೀಕಾಂತ ಮಾಳೋದೆ,ರವಿ ಮಾಲದಿನ್ನಿ, ರಮೇಶ ಕಿವಟಿ ಸೇರಿದಂತೆ ಜೆಸಿಐ ಸಂಸ್ಥೆಯ ಪದಾಧಿಕಾರಿಗಳು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಸಂಸ್ಥೆಯ ವತಿಯಿಂದ ರಕ್ತ ತಪಾಸಣಾ ಶಿಬಿರ ಜರುಗಿತು.