RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಮತದಾನಕ್ಕೆ ಕ್ಷಣಗಣನೆ : ಗೋಕಾಕ ಮತ್ತು ಅರಬಾಂವಿ ಕ್ಷೇತಗಳಲ್ಲಿ ಮತದಾನಕ್ಕೆ ಸಕಲ ಸಿದ್ದತೆ

ಗೋಕಾಕ:ಮತದಾನಕ್ಕೆ ಕ್ಷಣಗಣನೆ : ಗೋಕಾಕ ಮತ್ತು ಅರಬಾಂವಿ ಕ್ಷೇತಗಳಲ್ಲಿ ಮತದಾನಕ್ಕೆ ಸಕಲ ಸಿದ್ದತೆ 

ಸಾಂಧರ್ಭಿಕ ಚಿತ್ರ

ಮತದಾನಕ್ಕೆ ಕ್ಷಣಗಣನೆ : ಗೋಕಾಕ ಮತ್ತು ಅರಬಾಂವಿ ಕ್ಷೇತಗಳಲ್ಲಿ ಮತದಾನಕ್ಕೆ ಸಕಲ ಸಿದ್ದತೆ

ಗೋಕಾಕ ಮೇ 11 : ತೀವ್ರ ಕುತೂಹಲ ಕೆರಳಿಸಿರುವ ಜಿದ್ದಾಜಿದ್ದಿ ಕಾಳಗಕ್ಕೆ ರಾಜ್ಯ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು , ಬಹಿರಂಗ ಪ್ರಚಾರ ಗುರುವಾರ ಸಾಯಂಕಾಲ ಅಂತ್ಯಗೊಂಡಿದೆ . ಜಿಲ್ಲೆಯ ಒಟ್ಟು 18 ಕ್ಷೇತ್ರಗಳಲ್ಲಿ ಘಟಾನುಘಟ್ಟಿ ನಾಯಕರು ಸೇರಿದಂತೆ ಒಟ್ಟು 203 ಅಭ್ಯರ್ಥಿಗಳು ರಾಜ್ಯಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ .

ಸಾಮಾನ್ಯ ಕ್ಷೇತ್ರಗಳಾದ ಅರಬಾಂವಿ ಮತ್ತು ಗೋಕಾಕ ಕ್ಷೇತ್ರದಲ್ಲಿ ಸಚಿವ ರಮೇಶ ಜಾರಕಿಹೊಳಿ , ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ , ಅಶೋಕ ಪೂಜಾರಿ , ಭೀಮಶಿ ಗಡಾದ , ಅರವಿಂದ ದಳವಾಯಿ ಸೇರಿದಂತೆ ಒಟ್ಟು 17 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಅಣಿಯಾಗಿದ್ದಾರೆ

ತಾಲೂಕಾಡಳಿತ ಮತ್ತು ಚುನಾವಣಾ ಆಯೋಗ ನಾಳೆ ನಡೆಯುವ ಚುನಾವಣೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ

ಅರಬಾಂವಿ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 281 ಮತಗಟ್ಟೆಗಳು ಮತ್ತು ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 283 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ

ಅರಬಾಂವಿ ಕ್ಷೇತ್ರದಲ್ಲಿ 84 ಮತಗಟ್ಟೆಗಳನ್ನು ಅತೀಸೂಕ್ಷ್ಮ ಮತ್ತು 84 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗದರೆ ಗೋಕಾಕ ಮತಕ್ಷೇತ್ರದಲ್ಲಿ 58 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತ್ತು 108 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಚುನಾವಣಾಧಿಕಾರಿಗಳಾದ ದಿನೇಶಕುಮಾರ ಮತ್ತು ಶರಣಬಸಪ್ಪ ಅವರು ತಿಳಿಸಿದ್ದಾರೆ

ಈ ಭಾರಿ ರಾಜ್ಯದಲ್ಲೇ ಪ್ರಥಮವಾಗಿ ಮಹಿಳೆಯರಿಗೆ ಪ್ರತ್ಯೇಕವಾಗಿ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಈ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳೆ ಕಾರ್ಯನಿರ್ವಹಿಸಲ್ಲಿದ್ದಾರೆ . ಗೋಕಾಕ ಮತಕ್ಷೇತ್ರದಲ್ಲಿ 4 , ಅರಬಾಂವಿ ಮತಕ್ಷೇತ್ರದಲ್ಲಿ 5 ಒಟ್ಟು 9 ಕಡೆಗಳಲ್ಲಿ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ

ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದ ಪಿಂಕ್ ಮತಗಟ್ಟೆಗಳ ಮಾಹಿತಿ ಹೀಗಿದೆ ( ಆವರಣದಲ್ಲಿ ಮತಗಟ್ಟೆಗಳ ಸಂಖ್ಯೆ)

ಗೋಕಾಕ ಮತಕ್ಷೇತ್ರ : ಮಲ್ಲಾಪೂರ ಪಿ.ಜಿ (27) , ಕೊಣ್ಣೂರ (67) , ಗೋಕಾಕ (120) , ಮೇಲಮಟ್ಟಿ (87)

ಅರಬಾಂವಿ ಮತಕ್ಷೇತ್ರ : ನಾಗನೂರ ( 19) , ಮೂಡಲಗಿ (51) , ಚಾವಡಿ ಕಲ್ಲೋಳಿ ( 95) , ಅರಬಾಂವಿ (116) , ತುಕಾನಟ್ಟಿ (17)

ಅಂಗವಿಕಲರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಇದೇ ಮೊದಲ ಬಾರಿ ವೀಲ್ ಚೇರಗಳ ವ್ಯವಸ್ಥೆಯನ್ನು ಮಾಡಲಾಗಿದ್ದು , ಅಂಗವಿಕಲ ಮತದಾರರು ಇದರ ಸದುಪಯೋಗವನ್ನು ಪಡೆದುಕೋಳ್ಳಬಹುದಾಗಿದೆ

ಚುನಾವಣಾ ಕರ್ತವ್ಯದಲ್ಲಿರುವವರಿಗೆ ಗೋಕಾಕ ವಿಧಾನಸಭಾ ಚುನಾವಣಾಧಿಕಾರಿ ದಿನೇಶಕುಮಾರ ಅವರ ವಿಶೇಷ ಕಾಳಜಿ ವಹಿಸಿ ಎಲ್ಲ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆಯ ಸಹಯೋಗದಲ್ಲಿ “ಮೇಡಿಸಿನ್ ಕೀಟ್” ಒದಗಿಸಲಾಗಿದ್ದು , ಆಯಾ ಮತಗಟ್ಟೆ ಸಮೀಪ ವಿರುವ ಪ್ರಾಥಮಿಕ ಆರೋಗ್ಯ ಕೇಂದ್ರ , ಸಮೂದಾಯ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಚಿಕ್ಸಿತೆಗಾಗಿ ಅಂಬ್ಯೂಲನ್ಸ ವ್ಯವಸ್ಥೆ ಮತ್ತು ವೈದ್ಯರನ್ನು ನೇಮಿಸಲಾಗಿದೆ .

ಇನ್ನುಳಿದಂತೆ ಚುನಾವಣಾ ಪೂರ್ವಭಾವಿಯಾಗಿ ಎಲ್ಲ ಸಿದ್ದತೆಗಳನ್ನು ಕೈಗೋಳ್ಳಲಾಗಿದ್ದು , ಚುನಾವಣಾ ಆಯೋಗದ ನಿರ್ದೆಶನದಂತೆ ರ‍್ಯಾಂಪ , ಕುಡಿಯುವ ನೀರು , ವಿದ್ಯುತ್ ಸಂರ್ಪಕ , ಪಿಠೋಪಕರಣ ರಣ , ನಿರೀಕ್ಷಣಾ ಕೋಠಡಿ , ಶೌಚಾಲಯದ ಸೌಲಭ್ಯ ಕಲ್ಪಿಸಲಾಗಿದೆ . ಅಲ್ಲದೇ ಎಲ್ಲ ಮತಕ್ಷೇತ್ರಗಳಲ್ಲಿ ಸೂಕ್ತ ಭದ್ರತೆಯನ್ನು ಕೈಗೋಳಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ

Related posts: