ಗೋಕಾಕ:ಹಣ ಹಂಚಿದ ಆರೋಪ : ಸಚಿವ ರಮೇಶ ವಿರುದ್ಧ ಬಿಜೆಪಿ ಪ್ರತಿಭಟನೆ

ಹಣ ಹಂಚಿದ ಆರೋಪ : ಸಚಿವ ರಮೇಶ ವಿರುದ್ಧ ಬಿಜೆಪಿ ಪ್ರತಿಭಟನೆ
ಗೋಕಾಕ ಮೇ 7 : ಚುನಾವಣಾ ಪ್ರಚಾರಕ್ಕೆಂದು ರವಿವಾರದಂದು ತಾಲೂಕಿನ ಕೊಣ್ಣೂರ ಪಟ್ಟಣಕ್ಕೆ ಹೋಗಿದ್ದ ಕಾಂಗ್ರೇಸ ಅಭ್ಯರ್ಥಿ ಸಚಿವ ರಮೇಶ ಜಾರಕಿಹೊಳಿ ಅವರು ಆರತಿ ತಟ್ಟೆಯಲ್ಲಿ ಹಣ ಹಾಕಿ ನೀತಿ ಸಂಹಿತೆ ಉಲ್ಲಂಘನೆ ಮಾಡಿ ಮತದಾರರಿಗೆ ಆಮೀಶ ಒಡ್ಡಿದ್ದಾರೆಂದು ಆರೋಪಿ ಇಂದು ಸಾಯಂಕಾಲ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ
ಇಂದು ನಗರದಲ್ಲಿ ಜರುಗಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಪ್ರಚಾರ ಕಾರ್ಯಕ್ರಮ ಮುಗಿದ ನಂತರ ನಗರದ ವಾಲ್ಮೀಕಿ ವೃತ್ತದಿಂದ ಮೆರವಣಿಗೆ ಮುಖಾಂತರ ತಹಶೀಲ್ದಾರ್ ಕಛೇರಿ ಹತ್ತಿರ ಆಗಮಿಸುತ್ತಿದಂತೆ ಪೊಲೀಸರು ನುಡೆ ರಸ್ತೆಯಲ್ಲಿ ಅವರನ್ನು ತಡೆದಿದ್ದರಿಂದ ರಸ್ತೆ ಮಧ್ಯ ಧರಣಿ ನಡೆಯಿಸಿದ ಕಾರ್ಯಕರ್ತರು ಚುನಾವಣಾ ಆಯೋಗ ಸಚಿವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ .
ಪ್ರತಿಭಟನಾ ನಿರತರ ಮನವಿ ಪಡೆದು ಮಾತನಾಡಿದ ಚುನಾವಣಾಧಿಕಾರಿ ದಿನೇಶಕುಮಾರ ಅವರು ಆ ದಿನ ಚುನಾವಣಾ ಕರ್ತವ್ಯದಲ್ಲಿದ ಚುನಾವಣಾ ವಿಕ್ಷಕರಿಂದ ಮಾಹಿತಿ ಪಡೆದು ತಕ್ಷಣದಲ್ಲಿ ಕ್ರಮ ಜರುಗಿಸಲಾಗುವುದೆಂದು ಭರವಸೆ ನೀಡಿದ್ದಾರೆ . ಆದರೂ ಪ್ರತಿಭಟನಾ ನಿರತರು ತಮ್ಮ ಪ್ರತಿಭಟನೆಯನ್ನು ಮುಂದು ವರೆಸಿದ್ದಾರೆ .
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ ಎಲ್ ಮುತ್ತೆನ್ನವರ , ರಾಜು ಮುನ್ನವಳ್ಳಿ , ಶಶಿಧರ ದೇಮಶೆಟ್ಟಿ , ದಸ್ತಗೀರ ಪೈಲವಾನ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು