RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ಕಾಂಗ್ರೇಸ ಸರಕಾರ ಅಭಿವೃದ್ಧಿ ವಿರೋಧಿ ಸರಕಾರ : ಯು.ಪಿ.ಸಿಎಂ ಯೋಗಿ ಆಧಿತ್ಯನಾಥ

ಗೋಕಾಕ:ಕಾಂಗ್ರೇಸ ಸರಕಾರ ಅಭಿವೃದ್ಧಿ ವಿರೋಧಿ ಸರಕಾರ : ಯು.ಪಿ.ಸಿಎಂ ಯೋಗಿ ಆಧಿತ್ಯನಾಥ 

ಗೋಕಾದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ

ಕಾಂಗ್ರೇಸ ಸರಕಾರ ಅಭಿವೃದ್ಧಿ ವಿರೋಧಿ ಸರಕಾರ : ಯು.ಪಿ.ಸಿಎಂ ಯೋಗಿ ಆಧಿತ್ಯನಾಥ
ಗೋಕಾಕ ಮೇ 7 : ಕರ್ನಾಟಕದಲ್ಲಿರುವ ಸಿ.ಎಂ ಸಿದ್ದರಾಮಯ್ಯ ನವರ ಅಭಿವೃದ್ಧಿ ವಿರೋಧಿ , ರೈತ ವಿರೋಧಿ , ಯುವಕ ವಿರೋಧಿ ಸರಕಾರ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆಧಿತ್ಯನಾಥ ಹೇಳಿದರು

ಅವರು ಸೋಮವಾರದಂದು ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿ ಪರ ಪ್ರಚಾರಾರ್ಥ ನಗರದ ಚನ್ನಬಸವೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು

ದೇಶ ಸಂಕಷ್ಟದಲ್ಲಿರುವಾಗ ಅಜ್ಜಿಯ ನೆನಪಾಗಿ ಇಟಲಿ ದೇಶ ತಿರುಗುವ ರಾಹುಲ್ ಗಾಂಧಿಯಿಂದ ಅವರಿಂದ ದೇಶದ ಉದ್ದಾರವಾಗಲು ಸಾಧ್ಯವಿಲ್ಲ . ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬಂದ ಅನುದಾನ ಸರಿಯಾಗಿ ಸದ್ದಬಳಕೆ ಮಾಡದೆ ಸಿದ್ದರಾಮಯ್ಯ ನವರು ಸರ್ವಾಧಿಕಾರಿ ತೋರಿ ಅನುದಾನವನ್ನು ಕೋಳೇ ಹೊಡೆದ್ದಿದಾರೆ .

ಕೇಂದ್ರ ದಿಂದ ಸ್ವಚ್ಛ ಭಾರತ ಮಿಷನ್ ಬಿಡುಗಡೆಯಾದ ಅನುದಾನದಲ್ಲಿ ಉತ್ತರ ಪ್ರದೇಶದಲ್ಲಿ ಸುಮಾರು 46 ಲಕ್ಷ ಜನರಿಗೆ ಶೌಚಾಲಯ ನಿರ್ಮಿಸಿ ಕೊಡಲಾಗಿದೆ , ಸುಮಾರು 86 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ ಆದರೆ ಸಿದ್ದರಾಮಯ್ಯ ಸರಕಾರ ಇದ್ದೆಲಾ ಮಾಡದೆ ಜನರಿಗೆ ಮೋಸ ಮಾಡಿದೇ ಎಂದು ಸಿಎಂ ಯೋಗಿ ಅವರು ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿ ಯಾಗಬೇಕಾದರೆ ಬಿಜೆಪಿಗೆ ಬೆಂಬಲಿಸಿ ಗೋಕಾಕ ಮತಕ್ಷೇತ್ರದ ಅಭ್ಯರ್ಥಿ ಅಶೋಕ ಪೂಜಾರಿ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು

ವೇದಿಕೆಯಲ್ಲಿ ಬೆಳಗಾವಿ ಸಂಸದ ಸುರೇಶ ಅಂಗಡಿ , ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿ , ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು

Related posts: