ಬೆಳಗಾವಿ:ಜಿಲ್ಲಾ ಕೈ ನಾಯಕರಿಗೆ ಹೈಕಮಾಂಡ್ ಬುಲಾವ್ : ಇಂದು ಮಹತ್ವದ ಸಭೆ

ಜಿಲ್ಲಾ ಕೈ ನಾಯಕರಿಗೆ ಹೈಕಮಾಂಡ್ ಬುಲಾವ್ : ಇಂದು ಮಹತ್ವದ ಸಭೆ
ಬೆಳಗಾವಿ ಎ 10: ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆ ವಿಷಯ ಕಾಂಗ್ರೇಸ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ . ಎರೆಡು ದಿನಗಳೊಳಗಾಗಿ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ ಆಗಲಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಗಾ ಅವರು ಜಿಲ್ಲೆಯ ಮುಖಂಡರನ್ನು ದೆಹಲಿಗೆ ಕರೆಯಿಸಿ ಕೊಂಡಿದ್ದಾರೆ .
ರಾಹುಲ್ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ , ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ಮತ್ತು ವಿಪ ಸದಸ್ಯ ವಿವೇಕರಾವ ಪಾಟೀಲ ಅವರು ಸೋಮವಾರ ರಾತ್ರಿಯೇ ದೆಹಲಿ ತಲುಪಿದ್ದಾರೆ. ನಾಯಕರ ಜತೆಗೆ ಟಿಕೆಟ್ ಆಕಾಂಕ್ಷಿಗಳೂ ದೆಹಲಿ ತಲುಪಿ, ಲಾಬಿಗೆ ಮುಂದಾಗಿದ್ದಾರೆ.
ಇಂದು ಮಧ್ಯಾಹ್ನ ಜಿಲ್ಲಾ ಮುಖಂಡರ ಜತೆ ರಾಹುಲ್ ಸಭೆ ನಡೆಸಲಿದ್ದಾರೆ. ಟಿಕೆಟ್ ಘೋಷಣೆ ಬಳಿಕ ಬಂಡಾಯ, ಭಿನ್ನಮತ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಹೈ ಕಮಾಂಡ್ ಈ ಜಾಣ ನಡೆ ಅನುಸರಿಸುತ್ತಿದೆ.