ಬೆಳಗಾವಿ:5ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಗಾಯನದಲ್ಲಿ ನಿಧಿ ಕೇರೂರ , ಸಮೂಹ ನೃತ್ಯದಲ್ಲಿ ಸೇಂಟ್ ಜೋಸೆಫ್ ಶಾಲಾ ತಂಡ ಪ್ರಥಮ
5ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಗಾಯನದಲ್ಲಿ ನಿಧಿ ಕೇರೂರ , ಸಮೂಹ ನೃತ್ಯದಲ್ಲಿ ಸೇಂಟ್ ಜೋಸೆಫ್ ಶಾಲಾ ತಂಡ ಪ್ರಥಮ
ಬೆಳಗಾವಿ ಫೇ 11 : ನಗರದ ಸರ್ದಾರ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ರಂಗ ಸಜ್ಜಿಕೆಯಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಷನ್ ಅಡಿಯಲ್ಲಿ ಜರುಗಿದ 5ನೇ ಸತೀಶ ಶುಗರ್ಸ್ ಅವಾಡ್ರ್ಸ್ ನಲ್ಲಿ ಶನಿವಾರದಂದು ನಡೆದ ಮೊದಲ ದಿನದ ಅಂತಿಮ ಹಂತದ ಸಾಂಸ್ಕಂತಿಕ ಸ್ಪರ್ಧೆಯಲ್ಲಿ ಗಾಯನ , ಸೋಲೋ ಡಾನ್ಸ್ , ಸಮೂಹ ನೃತ್ಯ ಸ್ವರ್ಧೆಗಳು ಅತ್ಯಂತ ರೋಚಕತೆಯಿಂದ ಜರುಗಿದವು
ಕಾಲೇಜು ವಿಭಾಗದ ಗಾಯನ ಸ್ಪರ್ಧೆಯಲ್ಲಿ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ನಿಧಿ ಕೇರೂರ ಪ್ರಥಮ ಸ್ಥಾನ ಪಡೆದರೆ ಪ್ರಾಥಮಿಕ ವಿಭಾಗದ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಸೇಂಟ್ ಜೋಸೆಫ್ ಶಾಲೆ ತಂಡ ಪ್ರಥಮ ಸ್ಥಾನ ಪಡೆದು 60 ಸಾವಿರ ರೂಪಾಯಿಯ ಬೃಹತ್ ಮೊತ್ತದ ಬಹುಮಾನವನ್ನು ತಮ್ಮದಾಗಿಸಿಕೊಂಡರು .
ವಿವಿಧ ವಿಭಾಗಳಲ್ಲಿ ವಿಜೇತರ ವಿಧ್ಯಾರ್ಥಿಗಳ ಮಾಹಿತಿ
ಪ್ರೌಢಶಾಲಾ ವಿಭಾಗ, ಗಾಯನ ಸ್ಪರ್ಧೆ:- ನಿಧಿ ಕೇರೂರ ಪ್ರಥಮ ನಗದು 22 ಸಾವಿರ , ವಿನಾಯಕ ಇನಾಂದಾರ ದ್ವಿತೀಯ ನಗದು 16 ಸಾವಿರ , ಕಾಜಲ್ ಧಾಮನೇಕರ ತೃತೀಯ ನಗದು 12 ಸಾವಿರ ಮತ್ತು ಆರ್ಕಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರು
ಕಾಲೇಜು ವಿಭಾಗದ ಭಾಷಣ ಸ್ಪರ್ಧೆ: ವರುಣಶ್ರೀ ಪ್ರದಮ ನಗದು 22 ಸಾವಿರ , ಪವಿತ್ರಾ ಕಡೇವಾಡಿ ದ್ವಿತೀಯ ನಗದು 16 ಸಾವಿರ , ನೈನಾ ಜೆ.ಎಚ್ ತೃತೀಯ ನಗದು 12 ಸಾವಿರ ಮತ್ತು ಆರ್ಕಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರು
ಪ್ರಾಥಮಿಕ ಶಾಲಾ ವಿಭಾಗ ಸೋಲೋ ಡ್ಯಾನ್ಸ್ ಸ್ಪರ್ಧೆ: ಸಮೀಕ್ಷಾ ಕಾರಂತ ಪ್ರಥಮ ನಗದು 22 ಸಾವಿರ , ನಿಶೀತಾ ಭಂಡಾರಿ ದ್ವಿತೀಯ ನಗದು 16 ಸಾವಿರ , ಪ್ರಾರ್ಥನಾ ಗುರವ ತೃತೀಯ ನಗದು 12 ಸಾವಿರ ಮತ್ತು ಆರ್ಕಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರು
ಪ್ರೌಢಶಾಲಾ ವಿಭಾಗ ಸೋಲೋ ಡ್ಯಾನ್ಸ್ ಸ್ಪರ್ಧೆ: ವೈಷ್ಣವಿ ವಡ್ಡಿನ್ನವರ ಪ್ರಥಮ ನಗದು 22 ಸಾವಿರ , ಸಮ್ಮೇದ ಚೌಗಲಾ ದ್ವಿತೀಯ ನಗದು 16 ಸಾವಿರ , ಸೈಜಾನ ಘೀವಾಲೆ ತೃತೀಯ ನಗದು 12 ಸಾವಿರ ಮತ್ತು ಆರ್ಕಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರು
ಪ್ರಾಥಮಿಕ ವಿಭಾಗದ ಭಾಷಣ ಸ್ಪರ್ಧೆ : ಅಕ್ಷ ಪಾಟೀಲ್ (ಪ್ರಥಮ ) , ಭಾವನಾ ಪಾಟೀಲ್ (ದ್ವಿತೀಯ ) , ರಾಜದೀಪ ವರ್ಪೆ (ತೃತೀಯ) ಕ್ರಮವಾಗಿ 22, 16 , 12, ಸಾವಿರ ರೂಗಳ ನಗದು ಪುರಸ್ಕಾರ ಮತ್ತು ಆರ್ಕಷಕ ಟ್ರೋಫಿಗಳನ್ನು ಪಡೆದರು
ಪ್ರೌಢಶಾಲಾ ವಿಭಾಗದ ಭಾಷಣ ಸ್ಪರ್ಧೆ : ವೈಷ್ಣವಿ ಮಂಗನಾಯಿಕ ( ಪ್ರಥಮ) , ವೈಷ್ಣವಿ ಕಡೋಲ್ಕರ ( ದ್ವಿತೀಯ) , ಹುಸೇನಖಾನ ಮಾಡಿವಾಲೇ (ತೃತೀಯ) ಕ್ರಮವಾಗಿ 22, 16 , 12, ಸಾವಿರ ರೂಗಳ ನಗದು ಪುರಸ್ಕಾರ ಮತ್ತು ಆರ್ಕಷಕ ಟ್ರೋಫಿಗಳನ್ನು ಪಡೆದರು
ಪ್ರಾಥಮಿಕ ಶಾಲಾ ವಿಭಾಗದ ಸಮೂಹ ನೃತ್ಯ ಸ್ಪರ್ಧೆ: ಶ್ರೇಯೋ ಸತ್ತಿಗೇರಿ ಮತ್ತು ತಂಡ (ಪ್ರಥಮ) , ರಿಚಾ ರಜಪೂತ ಮತ್ತು ತಂಡ ( ದ್ವಿತೀಯ) , ರಾಧಾ ಪಾಟೀಲ್ ಮತ್ತು ತಂಡ (ತೃತೀಯ) ಕ್ರಮವಾಗಿ 60 , 50 , 40 ಸಾವಿರ ರೂಗಳ ಬೃಹತ್ ಮೋತ್ತದ ನಗದು ಪುರಸ್ಕಾರ ಮತ್ತು ಆರ್ಕಷಕ ಟ್ರೋಫಿಗಳನ್ನು ಪಡೆದರು
ಪ್ರಾಥಮಿಕ ಶಾಲಾ ವಿಭಾಗದ ಚಿತ್ರಕಲಾ ಸ್ಪರ್ಧೆ: ಮೀಥಾಲಿ ಪಾಟೀಲ್ (ಪ್ರಥಮ) , ಧೃತಿ ನಾಯಿಕ (ದ್ವಿತೀಯ), ದಿಪ್ಪತಿ ಸಪ್ಪಲಿಗಾ (ತೃತೀಯ) ಸ್ಥಾನ ಪಡೆದು ಕ್ರಮವಾಗಿ 22, 16 , 12, ಸಾವಿರ ರೂಗಳ ನಗದು ಪುರಸ್ಕಾರ ಮತ್ತು ಆರ್ಕಷಕ ಟ್ರೋಫಿಗಳನ್ನು ಪಡೆದರು