RNI NO. KARKAN/2006/27779|Thursday, July 3, 2025
You are here: Home » breaking news » ರಾಯಬಾಗ:ಬಸನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ರಾಯಬಾಗ:ಬಸನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ 

ಬಸನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ರಾಯಬಾಗ ಮೇ 20: ಅಕ್ರಮವಾಗಿ ಬಸ್‍ನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯೊರ್ವನನ್ನು ರಾಯಬಾಗ ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಶನಿವಾರದಂದು ಬೆಕ್ಕೇರಿ ರೇಲ್ವೆ ಗೇಟ್ ಬಳಿ ನಡೆದಿದೆ.
ತಾಲೂಕಿನ ಬೆಕ್ಕೇರಿ ಗ್ರಾಮದ ದಿಲೀಪ ಬಸಪ್ಪಾ ಕಾಂಬಳೆ(55) ಬಂಧಿತ ಆರೋಪಿ. ತಾಲೂಕಿನ ಬೆಕ್ಕೇರಿ ರೇಲ್ವೆ ಗೆಟ್ ಬಳಿ ರಾಯಬಾಗ ಡಿಪೋದ ರಾಯಬಾಗ-ಬೆಕ್ಕೇರಿ-ಮೊರಬ (ಕೆ.ಎ 23/ಎಫ್-333) ಬಸ್‍ನಲ್ಲಿ ಅಕ್ರಮವಾಗಿ ಸುಮಾರು 5 ಲೀ.ನಷ್ಟು ಕಳ್ಳಭಟ್ಟಿ ಸರಾಯಿಯನ್ನು ಮಾರಾಟಕ್ಕಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ರಾಯಬಾಗ ಅಬಕಾರಿ ಅಧಿಕಾರಿಗಳು ಬಸ್‍ನ್ನು ರೇಲ್ವೆ ಗೇಟ್ ಬಳಿ ನಿಲ್ಲಿಸಿ, ತಪಾಸಣೆ ಮಾಡಿದಾಗ ಆರೋಪಿ ಕಳ್ಳಭಟ್ಟಿ ಸಾರಾಯಿಯೊಂದಿಗೆ ಸಿಕ್ಕಿರುತ್ತಾನೆ.
ಉಪನಿರೀಕ್ಷಕ ಹಣಮಂತಪ್ಪ ಪಟಾತ ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ರಕ್ಷಕರಾದ ಶಿವಪುತ್ರಪ್ಪ ಮಂಗಸೂಳಿ, ಎಂ.ಎಲ್ ಸಾಲೋಟಗಿ, ಬಿ.ಎಸ್.ಪಾಟೀಲ ಪಾಲ್ಗೊಂಡಿದ್ದರು.

ವರದಿ: ರಂಜೀತ ಕಾಂಬಳೆ

Related posts: