RNI NO. KARKAN/2006/27779|Saturday, August 2, 2025
You are here: Home » breaking news » ಖಾನಾಪುರ:ನಿಂಬಾಳ್ಕರ ಗೆ ಶಾಕ್ : ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ ನೇತೃತ್ವದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ “ಕೈ” ಮುಖಂಡರು

ಖಾನಾಪುರ:ನಿಂಬಾಳ್ಕರ ಗೆ ಶಾಕ್ : ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ ನೇತೃತ್ವದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ “ಕೈ” ಮುಖಂಡರು 

ನಿಂಬಾಳ್ಕರ ಗೆ ಶಾಕ್ : ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ ನೇತೃತ್ವದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ “ಕೈ” ಮುಖಂಡರು

ಖಾನಾಪುರ ಏ 19 : ಕಳೆದ 2013 ರ‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ರಫೀಕ ಖಾನಾಪುರಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲಿಗೆ ಕಾರಣರಾದ ಅಂಜಲಿ ನಿಂಬಾಳ್ಕರ ಅವರನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಡಾ.ಜಿ ಪರಮೇಶ್ವರವರು ಈಗ ಮತ್ತೆ ಅಂಜಲಿ ನಿಂಬಾಳ್ಕರ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಸ್ಥಳಿಯ ಟಿಕೆಟ್ ಆಕಾಂಕ್ಷಿಗಳಿಗೆ ಅವಮಾನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯ ವೈಖರಿಗೆ ಬೇಸತ್ತು ಇಂದು ಸುಮಾರು 250ಕ್ಕೂ ಅಧಿಕ ಮುಖಂಡರು ಮತ್ತು ಕಾರ್ಯಕರ್ತರು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ
ರಫೀಕ ಖಾನಾಪುರಿ, ಪ್ರಕಾಶ ಪಾಟೀಲ, ವಿಜಯ ಬಿರ್ಜೆ, ನಿರೂಪಾದಿ ಕಾಂಬ್ಳೆ, ಪ್ರಕಾಶ ಮಾದರ, ಸಲೀಂ ಪಟೇಲ, ಮುನಾಫ ಸನದಿ, ಮಕಬೂಲ ಸನದಿ, ಶ್ರೀಕಾಂತ ಬಲ್ಲಾಳ, ನಾಮದೇವ ಬೀಡಿಕರ, ಯಲ್ಲಪಾ, ಎಮ್,ಎಮ್.ಸಾಹುಕಾರ, ನಸರೀನ ಕಿತ್ತೂರ, ಗೀತಾ ಪೂಜಾರ, ಅಜೀಜ ಗಿರಿಯಾಲ, ಶಬ್ಬೀರ ಕಿತ್ತೂರು, ಮುಬಾರಕ, ಸಚೀನ ಗಸ್ತೆ, ಎನ್.ಸಿ.ತಳವಾರ, ರಾಮಪ್ಪಾ, ಕಲ್ಲಪ್ಪಾ ಮಾದರ ಹಾಗೂ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

Related posts: