RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಗೋಕಾಕದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಸರ್ಕಾರಿ ನೌಕರರು ಪ್ರತಿಭಟನೆ..!

ಗೋಕಾಕ:ಗೋಕಾಕದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಸರ್ಕಾರಿ ನೌಕರರು ಪ್ರತಿಭಟನೆ..! 

ಗೋಕಾಕದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಸರ್ಕಾರಿ ನೌಕರರು ಪ್ರತಿಭಟನೆ..!

ಗೋಕಾಕ ಜ 19: ಎನ್ ಪಿಎಸ್ ಯೋಜನೆಯನ್ನು ಕೈಬಿಟ್ಟು ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಒತ್ತಾಯಿಸಿ ಗೋಕಾಕದಲ್ಲಿ ಇವತ್ತು ಸರ್ಕಾರಿ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಬಸವೇಸ್ವರ ವ್ರತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಎನ್ ಪಿಎಸ್ ಹಠಾವೋ ನೌಕರ್ ಬಚಾವೋ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಹಸಿಲ್ದಾರ ಗೋಕಾಕ ಕಚೇರಿ ಎದುರು ಆಗಮಿಸಿ ತಹಸಿಲ್ದಾರರಿಗೆ ಮನವಿ ಸಲ್ಲಿಸಿದರು.

ಹೊಸ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ಅನಾನುಕೂಲವಾಗಲಿದ್ದು, ಸರ್ಕಾರ ಕೂಡಲೇ ಯೋಜನೆಯನ್ನು ಕೈ ಬಿಟ್ಟು ಹಳೆ ಪದ್ದತಿಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ನೂರಾರು ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related posts: