ಗೋಕಾಕ:ಶಿಕ್ಷಕರು ಉತ್ತಮ ನಾಗರಿಕರನ್ನು ನಿರ್ಮಿಸುವ ಶಿಲ್ಪಿಗಳು : ಪ್ರಾಚಾರ್ಯ ಡಿ.ರಾಮದಾಸ್
ಶಿಕ್ಷಕರು ಉತ್ತಮ ನಾಗರಿಕರನ್ನು ನಿರ್ಮಿಸುವ ಶಿಲ್ಪಿಗಳು : ಪ್ರಾಚಾರ್ಯ ಡಿ.ರಾಮದಾಸ್
ಗೋಕಾಕ ಜ 6 : ಶಿಕ್ಷಕರು ಉತ್ತಮ ನಾಗರಿಕರನ್ನು ನಿರ್ಮಿಸುವ ಶಿಲ್ಪಿಗಳಾಗಿದ್ದು ತಮ್ಮ ವೃತ್ತಿ ಜೀವನದಲ್ಲಿ ಅಂತಹ ನಾಗರಿಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡುವಂತೆ ಎಸ್.ಎಲ್.ಜೆ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ರಾಮದಾಸ್ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯ(ಬಿಈಡಿ) ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ದೀಪದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಸಮಾಜದಲ್ಲಿ ಗುರುವಿಗೆ ಭಗವಂತನಿಗಿಂತ ಶ್ರೇಷ್ಠಸ್ಥಾನವಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ಒಳ್ಳೇಯ ಪ್ರಜೆಗಳನ್ನಾಗಿ ಮಾಡಿ, ನಿರಂತರ ಅಧ್ಯಯನದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನು ಪ್ರತಿಭಾನ್ವಿತರನ್ನಾಗಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿ ಗುರುವಿನ ಮಹತ್ವವನ್ನು ಹೆಚ್ಚಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ ವಹಿಸಿದ್ದರು.ವೇದಿಕೆ ಮೇಲೆ ಪ್ರಾಚಾರ್ಯ ಡಾ| ಎಸ್.ಎಂ ನದಾಫ್, ಉಪನ್ಯಾಸಕ ಶ್ರೀದರ್ ರಾವ್ ಇದ್ದರು.
ಕಣ್ಣಪ್ಪ ಹುರುಳಿ ಸ್ವಾಗತಿಸಿದರು. ಪ್ರಮೋದ ದಾಸರ ನಿರೂಪಿಸಿದರು. ವಿಜಯ ಕಮತರ ವಂದಿಸಿದರು.