ಗೋಕಾಕ:ಜಿಲ್ಲೆಯ ಎಲ್ಲ ನಾಯಕರನ್ನು ಒಗ್ಗೂಡಿಸಿ ಪಕ್ಷದ ಗೆಲುವಿಗೆ ಶ್ರಮಿಸುವೆ : ಸಹಕಾರಿ ಸಚಿವ ರಮೇಶ
ಜಿಲ್ಲೆಯ ಎಲ್ಲ ನಾಯಕರನ್ನು ಒಗ್ಗೂಡಿಸಿ ಪಕ್ಷದ ಗೆಲುವಿಗೆ ಶ್ರಮಿಸುವೆ : ಸಹಕಾರಿ ಸಚಿವ ರಮೇಶ
ಗೋಕಾಕ ಡಿ 21: ನಾನೇ ಒಂದು ಹೆಜ್ಜೆ ಹಿಂದೆ ಸರಿದು ಪಕ್ಷದ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲ ನಾಯಕರನ್ನು ಒಗ್ಗೂಡಿಸಿಕೊಂಡು ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಅವರು ಗುರುವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು
ಬಿಜೆಪಿಯವರು ಅಭಿವೃದ್ಧಿ ಮಾಡದೆ ಕಾಂಗ್ರೆಸ್ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಇವರ ಸುಳ್ಳು ಪ್ರಚಾರಕ್ಕೆ ಯಾರು ಕಿವಿಗೋಡಬಾರದು ಎಂದು ಹೇಳಿದರಲ್ಲದೇ, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಜಿಲ್ಲೆಯಲ್ಲಿ 10ರಿಂದ 12 ಸೀಟು ಗೆಲ್ಲುತ್ತೇವೆ ಎಂದು ಭರವಸೆ ನೀಡಿದರು.
ಟಿಕೆಟ್ ನೀಡುವಾಗ ರಮೇಶ ಜಾಕಿಹೊಳಿ, ಸತೀಶ ಜಾರಕಿಹೊಳಿ , ಪ್ರಕಾಶ ಹುಕ್ಕೇರಿ ಸೇರಿದಂತೆ ಇನ್ನುಳಿದ ನಾಯಕರ ಮಾತು ಕೇಳದೆ ಗೆಲುವವರಿಗೆ ಪಕ್ಷದ ಟಿಕೇಟ್ ನೀಡುವಂತೆ ಸಚಿವ ರಮೇಶ ಜಾರಕಿಹೊಳಿ ಅವರು ಸಿ.ಎಂ ರಲ್ಲಿ ವಿನಂತಿಸಿದ್ದರಲ್ಲದೆ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೋ ಅವರನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ರಮೇಶ್ ಜಾರಕಿಹೊಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೀರಾವರಿ ಸಚಿವ ಎಂ.ಬಿ ಪಾಟೀಲ, ಜಿ.ಪಂ ಅಧ್ಯಕ್ಷೆ ಶ್ರೀಮತಿ ಆಶಾ ಐಹೋಳೆ , ಯುವ ಧುರೀಣ ಲಖನ್ ಜಾರಕಿಹೊಳಿ , ತಾ.ಪಂ ಅಧ್ಯಕ್ಷೆ ಶ್ರೀಮತಿ ಸುನಂದಾ ಕರದೇಸಾಯಿ , ನಗರಸಭೆ ಅಧ್ಯಕ್ಷ ತಳದಪ್ಪಾ ಅಮ್ಮಣಗಿ , ಜಿ.ಪಂ. ಸದಸ್ಯರಾದ ಟಿ.ಆರ್.ಕಾಗಲ್ , ಮಡ್ಡೆಪ್ಪಾ ತೋಳಿನವರ , ರಾವಸಾಬ ಪಾಟೀಲ , ನಜೀರ ಶೇಖಶ, ಎಸ್.ಎ. ಕೋತವಾಲ , ಅಬ್ಬಾಸ ದೇಸಾಯಿ , ಆನಂದ ಚೋಪ್ರಾ , ಶಿವಾನಂದ ಡೋಣಿ ,ಅರವಿಂದ ದಳವಾಯಿ , ಯಲಿಗಾರ , ವಿಶ್ವಾಸ ವೈದ್ಯ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು