RNI NO. KARKAN/2006/27779|Thursday, April 2, 2026
You are here: Home » breaking news » ಬೆಳಗಾವಿ:ಮೌಢ್ಯ ವಿರೋಧಿ ಸಂಕಲ್ಪ ದಿನ : ಸ್ಮಶಾನದಲ್ಲಿ ಇಡೀ ರಾತ್ರಿ ಕಳೆದ ಶಾಸಕ ಸತೀಶ

ಬೆಳಗಾವಿ:ಮೌಢ್ಯ ವಿರೋಧಿ ಸಂಕಲ್ಪ ದಿನ : ಸ್ಮಶಾನದಲ್ಲಿ ಇಡೀ ರಾತ್ರಿ ಕಳೆದ ಶಾಸಕ ಸತೀಶ 

ಮೌಢ್ಯ ವಿರೋಧಿ ಸಂಕಲ್ಪ ದಿನ : ಸ್ಮಶಾನದಲ್ಲಿ ಇಡೀ ರಾತ್ರಿ ಕಳೆದ ಶಾಸಕ ಸತೀಶ

ಬೆಳಗಾವಿ ಡಿ 7: ಬುಧವಾರ ಇಡೀ ರಾತ್ರಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಸದಾಶಿವ ನಗರ ಸ್ಮಶಾನದಲ್ಲಿ ಮಲಗಿ ಕಾಲ ಕಳೆದರು. ಮಾನವ ಬಂಧುತ್ವ ವೇದಿಕೆ ವತಿಯಿಂದ ಬುಧವಾರ ಸ್ಮಶಾನದಲ್ಲಿ ನಡೆದ ಮೌಢ್ಯವಿರೋಧಿ ಸಂಕಲ್ಪ ದಿನ ನಂತರ ಇಡೀ ರಾತ್ರಿ ವಾಸ್ತವ್ಯ ಹೂಡಿದರು

ಟೀಕಾಕಾರರು ಲಕ್ಸುರಿ ಬಸ್ ನಲ್ಲಿ ಮಲಗುತ್ತಾರೆ ಎಂಬ ಆರೋಪವನ್ನು ಸಲಹೆಯಾಗಿ ಸ್ವೀಕರಿಸಿದ ಸತೀಶ ಜಾರಕಿಹೊಳಿ ತಮ್ಮ ಬೆಂಬಲಿಗರೊಂದಿಗೆ ತೆರೆದ ಸ್ಮಶಾನದಲ್ಲಿ ಮಲಗಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಅಧ್ಯಕ್ಷ ನಾಗರಾಜ ಯಾದವ ಶಾಸಕ ಸತೀಶ ಜಾರಕಿಹೊಳಿ ಅವರೊಂದಿಗಿದ್ದು ವಾಸ್ತವ್ಯ ಹೂಡಿದರು. ನಿದ್ರೆಗೆ ಜಾರುವ ಮುನ್ನ ಇಳಿರಾತ್ರಿವರೆಗೆ ಲೋಕರೂಢಿ ಹರಟೆ ನಡೆಯಿತು. ಶಾಸಕರ ಬೆಂಬಲಿಗರು ಸ್ಮಶಾನದಲ್ಲಿ ಉಪಸ್ಥಿತರಿದ್ದರು

Related posts: