RNI NO. KARKAN/2006/27779|Sunday, February 15, 2026
You are here: Home » breaking news » ಬೈಲಹೊಂಗಲ:ಸಂಸದ ಪ್ರತಾಪಸಿಂಹ ಕೋಮುವಾದಿ ಶೀಘ್ರ ಗಡಿಪಾರು ಮಾಡಿ

ಬೈಲಹೊಂಗಲ:ಸಂಸದ ಪ್ರತಾಪಸಿಂಹ ಕೋಮುವಾದಿ ಶೀಘ್ರ ಗಡಿಪಾರು ಮಾಡಿ 

ಸಂಸದ ಪ್ರತಾಪಸಿಂಹ ಕೋಮುವಾದಿ ಶೀಘ್ರ ಗಡಿಪಾರು ಮಾಡಿ

ಬೈಲಹೊಂಗಲ ಡಿ 2: ಮೈಸೂರಿನ ಸಂಸದ ಹಾಗೂ ಬಿ.ಜೆ.ಪಿ ಪಕ್ಷದ ರಾಜ್ಯ ಯವ ಘಟಕದ ಅದ್ಯಕ್ಷ ಪ್ರತಾಪ ಸಿಂಹ ಬೆಂಬಲಿಗರು ಸಾಮಾಜಿಕ ಜಾಲತಾಣ ಫೇಸ್‍ಬುಕ್ ಪೇಜ್‍ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವ ಕುರಿತು ಅವಹೇಳನಕಾರಿಯಾಗಿ ಪೆÇೀಸ್ಟ್‍ಗೆ ಸಂಬಂಧಿಸಿದಂತೆ ಬೈಲಹೊಂಗಲದಲ್ಲಿ ಕಿತ್ತೂರ ಚನ್ನಮ್ಮ, ಹಾಗೂ ಒನಕೆ ಒಬ್ಬನ ಅಭಿಮಾನಗಳು ಪಕ್ಷಾತೀತವಾಗಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಸಂಗೋಳ್ಳಿ ರಾಯಣ್ಣ ಸರ್ಕಲನಲ್ಲಿ ಪ್ರತಾಪಸಿಂಹ ಅಭಿಮಾನಿಗಳು ಮಾಡಿದ ಅವಹೇಳನಕಾರಿ ಪೋಸ್ಟ್‍ಗಳಿಗೆ ವಿರೋದವ್ಯಕ್ತಪಡಿಸಿ ಪ್ರತಾಪಸಿಂಹನ ಪ್ರತಿಕೃತಿಗಳಿಗೆ ಚಪ್ಪಲಿಹಾರ ಹಾಕಿ ಪ್ರತಾಪಸಿಂಹ ದೇಶದ್ರೋಹಿ, ಕೋಮುವಾದಿ, ಕಲಹಸೃಷ್ಠಿಸುವ ಸಮಾಜಘಾತುಕ ಇತನನ್ನು ಕೂಡಲೇ ಬಂದಿಸಬೇಕು ಎಂದು ರಸ್ತೆ ತಡೆ ನಡೆಸಿ ಪ್ರತಿಕೃತಿ ದಹಿಸಿದರು. ಇತ ಸ್ವಾಸ್ಥೆ ಸಮಾಜದಲ್ಲಿ ಕಲಹ ಸೃಷ್ಠಿಸುವ ಉಗ್ರಗಾಮಿ, ದೇಶಭಕ್ತ ಟಿಪ್ಪುವಿನ ಜಯಂತಿ ವಿರೋಧಿಸಿ ರಾಜ್ಯದಾದ್ಯಂತ ಇಸ್ಲಾಂ ಧರ್ಮೀಯರೊಂದಿಗೆ ಕೋಮುಕಲಹ ಸೃಷ್ಠಿಸಿದ ದೇಶದ್ರೋಹಿ ಎಂದು ಜೆ.ಡಿ.ಎಸ್ ಜಿಲ್ಲಾದ್ಯಕ್ಷ ಶಂಕರ ಮಾಡಲಗಿ ಕಾಂಗ್ರೇಸ್ ಮುಖಂಡ ಕಿರಣ ಸಾಧುನವರ ನೇತೃತ್ವದಲ್ಲಿ ಭೃಹತ್ ಪ್ರತಿಭಟನೆ ನಡೆಸಿದರು.
ಬಿ.ಜೆ.ಪಿ ಕೇಂದ್ರದ ಆಡಳಿತಾರೂಢ ಪಕ್ಷವಾಗಿದ್ದು ಇತ ಪಕ್ಷದ ಉನ್ನತ ಸ್ಥಾನದಲ್ಲಿ ರಾಜದ ಜನತೆಯ ಮನಸ್ಸು ಗಾಸಿಗೊಳಿಸಿದ್ದಾನೆ ಆದರಿಂದ ಸಂಸದ ಪ್ರತಾಪಸಿಂಹ ಹಾಗೂ ಆತನ ಬೆಂಬಲಿಗರನ್ನು ಶೀಘ್ರ ಬಂಧಿಸಬೇಕೆಂದು ಉಪವಿಭಾಗಧಿಕಾರಿಗಳಿಗೆ ಮನವಿ ಮಾಡಿದರು. ಮಹಾಂತೇಶ ಮತ್ತಿಕೊಪ್ಪ, ಎಸ್.ಎಸ್ ಪಾಟೀಲ, ಈರಣ್ಣಾ ಬೇಟಗೇರಿ, ವಿರುಪಾಕ್ಷಪ್ಪ ವಾಲಿ, ಬಸವರಾಜ ಕಲಾದಗಿ, ವಿರೇಶ ಹಲಕಿ ಹಾಗೂ ನೂರಾರು ಯುವಕರು ಪಕ್ಷಾತೀತವಾಗಿ ಹೋರಾಟ ಮಾಡಿದರು.

Related posts: