RNI NO. KARKAN/2006/27779|Wednesday, November 18, 2026
You are here: Home » breaking news » ಗೋಕಾಕ:ಜನಸೇವೆ ಮಾಡುವ ಅಧಿಕಾರಿಗಳಿಗೆ ನಾವು ಸದಾ ಸಹಕಾರ ನೀಡುತ್ತೇವೆ : ಶಾಸಕ ರಮೇಶ ಅಭಿಮತ

ಗೋಕಾಕ:ಜನಸೇವೆ ಮಾಡುವ ಅಧಿಕಾರಿಗಳಿಗೆ ನಾವು ಸದಾ ಸಹಕಾರ ನೀಡುತ್ತೇವೆ : ಶಾಸಕ ರಮೇಶ ಅಭಿಮತ 

ಜನಸೇವೆ ಮಾಡುವ ಅಧಿಕಾರಿಗಳಿಗೆ ನಾವು ಸದಾ ಸಹಕಾರ ನೀಡುತ್ತೇವೆ : ಶಾಸಕ ರಮೇಶ ಅಭಿಮತ
ಗೋಕಾಕ ನ 18 : ಜನಸೇವೆ ಮಾಡುವ ಅಧಿಕಾರಿಗಳಿಗೆ ನಾವು ಸದಾ ಸಹಕಾರ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಬುಧವಾರದಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಗೋಕಾಕ ಮತ್ತು ವೃಂದ ಸಂಘಗಳ ಸಂಯುಕ್ತಾಶ್ರಯದಲ್ಲಿ ಪದೋನ್ನತಿ ಹೊಂದಿ ವರ್ಗವಾಗಿರುವ ತಹಶೀಲ್ದಾರ್ ಡಾ.ಮೋಹನ ಭಸ್ಮೆ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ ಅವರ ಬಿಳ್ಕೋಡಗೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಸೇವಾ ಮೊನೋಭಾವದಿಂದ ಕಾರ್ಯನಿರ್ವಹಿಸಿ ಜನರ ಮನದಲ್ಲಿ ಉಳಿಯಬೇಕು. ತಹಶೀಲ್ದಾರ್ ಡಾ.ಮೋಹನ ಭಸ್ಮೆ ಮತ್ತು ಮುಖ್ಯಾಧಿಕಾರಿ ಡಾ.ರವೀಂದ್ರ ಅಂಟಿನ ಅವರು ಪದೋನ್ನತಿ ಹೊಂದಿದ್ದ ಕಾರಣ ಅವರನ್ನು ನಾವು ಬಿಡುತ್ತಿದ್ದೇವೆ.ಇಲ್ಲದಿದ್ದರೆ ಅವರನ್ನು ಇಲ್ಲಿಯೇ ಮುಂದುವರೆಸುವ ಇಚ್ಚೆ ಇತ್ತು. ನಾವು ಅಧಿಕಾರಿಗಳ ಮೇಲೆ ಯಾವುದೇ ದರ್ಪಮಾಡಿ ರಾಜಕೀಯ ಮಾಡವುದಿಲ್ಲ. ಅಧಿಕಾರಿಗಳು ಬಡವರ ಪರವಾಗಿ ಕೆಲಸ ಮಾಡುವ ಹಂಬಲ ಹೊಂದಬೇಕು. ಪಕ್ಷಾತೀತವಾಗಿ ಜಾರಕಿಹೊಳಿ ಕುಟುಂಬ ಸಾರ್ವಜನಿಕರ ಸೇವೆ ಮಾಡುತ್ತಿದೆ. ರಾಜಕೀಯವಾಗಿ ನಾನು ಎಂದು ದ್ವೇಷ ಮಾಡಿಲ್ಲ. ಗೋಕಾಕದ ಪ್ರತಿಯೊಬ್ಬ ಅಧಿಕಾರಿಗಳು ನಮ್ಮವರೆ ಜನರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಜನರಿಗೆ ತೊಂದರೆ ಕೊಟ್ಟರೆ ಮಾತ್ರ ನಾವು ಅಧಿಕಾರಿಗಳು ಮೇಲೆ ಸಿಟ್ಟು ಮಾಡುತ್ತೇವೆ ವಿನಃ ಬೇರೆ ವಿಷಯಕ್ಕೆ ಅಲ್ಲ. ಮುಂದೆ 2028 ಕ್ಕೆ ಗೋಕಾಕ ಜಿಲ್ಲಾ ಆದರೆ ಡಾ.ಮೋಹನ ಭಸ್ಮೆ ಅವರು ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಯಾಗಿ ಮತ್ತೆ ಗೋಕಾಕಕ್ಕೆ ಬರಬಹುದು ಡಾ. ಭಸ್ಮೆ ಮತ್ತು ಡಾ.ಅಂಟಿನ ಅವರ ಮುಂದಿನ ಜೀವನ ಸುಖಕರವಾಗಲಿ ಎಂದು ಹಾರೈಸಿದರು.

ತಾಪಂ ಅಧಿಕಾರಿ ಪರಶುರಾಮ ಗಸ್ತೆ ಮಾತನಾಡಿ ಸರಕಾರಿ ನೌಕರಿ ಮಾಡುವುದು ಒಂದು ಸವಾಲಿನ ಕೆಲಸವಾಗಿದ್ದು, ಸಾರ್ವಜನಿಕರ ಸ್ನೇಹಿಯಾಗಿ, ಜನರ ಮನದಲ್ಲಿ ಉಳಿಯುವ ಹಾಗೆ ಡಾ.ಮೋಹನ ಭಸ್ಮೆ ಮತ್ತು ಡಾ.ರವೀಂದ್ರ ಅಂಟಿನ ಅವರು ಕೆಲಸ ಮಾಡಿದ್ದಾರೆ. ಅವರ ಸೇವೆ ಗೋಕಾಕ ತಾಲೂಕಿಗೆ ಇನ್ನು ಬೇಕಾಗಿತ್ತು ಎಂದರು.

ತಹಶೀಲ್ದಾರ್ ಡಾ.ಮೋಹನ ಭಸ್ಮೆ ಮಾತನಾಡಿ ನನ್ನ ಅಧಿಕಾರ ಅವಧಿಯಲ್ಲಿ ಸುಮಾರು 8 ತಾಲೂಕುಗಳಲ್ಲಿ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿದ್ದೆನೆ ಅದರಲ್ಲಿ 12 ಶಾಸಕರ ಜೊತೆ ಕೆಲಸ ಮಾಡುವ ಅವಕಾಶ ದೊರೆತಿದೆ. ಆದರೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರೊಂದಿಗೆ ಕಾರ್ಯಮಾಡುವ ಅವಕಾಶ ಸಿಕ್ಕಿದ್ದು ನಾನು ಎಂದು ಮರೆಯುವುದಿಲ್ಲ. ನಾನು ಗೋಕಾಕನ್ನು ಬಿಟ್ಟು ಹೋಗುತ್ತಿರುಬಹುದು ಆದರೆ ಗೋಕಾಕಕಿನ ಜನರ ಪ್ರೀತಿಯನ್ನು ಬಿಟ್ಟು ಹೋಗುತ್ತಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ಗೋಕಾಕಿನ ಜನಪ್ರತಿನಿಧಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರು ತುಂಬಾ ಸಹಕಾರ ನೀಡಿದ್ದಾರೆ. ಜನರ ಭಾವನೆಗೆ ತಕ್ಕಂತೆ ನಾನು ಗೋಕಾಕ ತಾಲೂಕಿನ ದಂಡಾಧಿಕಾರಿಯಾಗಿ ಒಳ್ಳೆಯ ಕೆಲಸ ಮಾಡುವ ಅವಕಾಶ ದೊರೆಕಿದ್ದು ನನ್ನ ಭಾಗ್ಯ ಎಂದು ಹೇಳಿದರು.
ಡಾ. ರವೀಂದ್ರ ಅಂಟಿನ ಮಾತನಾಡಿ ಶಾಸಕರ ಮಾರ್ಗದರ್ಶನದಲ್ಲಿ ಗೋಕಾಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ಜನರ ಸೇವೆ ಮಾಡಲು ಅವಕಾಶ ದೊರಕಿದ್ದು ನಮ್ಮ ಸುದೈವ. ತಾಲೂಕಿನ ಇತರ ಇಲಾಖೆಗಳ ಅಧಿಕಾರಿಗಳ ಸಹಕಾರದಿಂದ 9 ವರ್ಷಗಳಕಾಲ ಗೋಕಾಕನಲ್ಲಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅಧಿಕಾರ ಅವಧಿಯ ಅಮೃತ ಕ್ಷಣ ಎಂದು ಬಣ್ಣಿಸಿದರು.
ಈ ವೇದಿಕೆಯ ಮೇಲೆ ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಕುಂಬಾರ, ತಾಲೂಕಾಧ್ಯಕ್ಷ ವಿನಾಯಕ ಮಾಳಿ, ತಾಪಂ ಅಧಿಕಾರಿ ಪರಶುರಾಮ ಗಸ್ತೆ, ವಕೀಲರ ಸಂಘದ ಅಧ್ಯಕ್ಷ ಸುಭಾಷಶ್ಚಂದ್ರ ಬಿ.ಪಾಟೀಲ್ ಉಪಸ್ಥಿತರಿದ್ದರು.

Related posts: