ಗೋಕಾಕ:ನಿರಂತರ ಸಮಾಜ ಸೇವೆ ಮಾಡಿ ರಾಜ್ಯದ ಜನರ ಮನದಲ್ಲಿ ಶಾಶ್ವತವಾಗಿ ಜಾರಕಿಹೊಳಿ ಕುಟುಂಬ ನೆಲೆಸಿದೆ : ಶ್ರೀ ಮಲ್ಲಯ್ಯಾ ಸ್ವಾಮೀಜಿ

ನಿರಂತರ ಸಮಾಜ ಸೇವೆ ಮಾಡಿ ರಾಜ್ಯದ ಜನರ ಮನದಲ್ಲಿ ಶಾಶ್ವತವಾಗಿ ಜಾರಕಿಹೊಳಿ ಕುಟುಂಬ ನೆಲೆಸಿದೆ : ಶ್ರೀ ಮಲ್ಲಯ್ಯಾ ಸ್ವಾಮೀಜಿ
ಗೋಕಾಕ ಅ 2 : ಭಗವಂತನ ಕೊಟ್ಟ ಅವಕಾಶಗಳನ್ನು ಸದುಪಯೋಗ ಪಡೆಸಿಕೊಂಡು ನಿರಂತರ ಸಮಾಜ ಸೇವೆ ಮಾಡಿ ರಾಜ್ಯದ ಜನರ ಮನದಲ್ಲಿ ಶಾಶ್ವತವಾಗಿ ಜಾರಕಿಹೊಳಿ ಕುಟುಂಬ ನೆಲೆಸಿದೆ ಎಂದು ಘೋಡಗೇರಿ ಶ್ರೀ ಶಿವಾನಂದ ಮಠದ ಶ್ರೀ ಮಲ್ಲಯ್ಯಾ ಸ್ವಾಮೀಜಿ ಹೇಳಿದರು.
ಶುಕ್ರವಾರದಂದು ನಗರದ ಹಿಲ್ ಗಾರ್ಡನ್ ಕಛೇರಿಯ ಆವರಣದಲ್ಲಿ ಡಿಸಿಸಿ ಹಾಗೂ ಅಪೆಕ್ಸ ಬ್ಯಾಂಕ್ ನಿರ್ದೇಶಕ, ಕೆಪಿಸಿಸಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಅವರ 27ನೇ ಹುಟ್ಟು ಹಬ್ಬದ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ನಾಡಕಂಡು ಅಪರೂಪದ ಯುವ ಚೇತನ ರಾಹುಲ್ ಜಾರಕಿಹೊಳಿ, ಅವರ ಕೆಲಸ ನೋಡಿ ರಾಜ್ಯ ಅವರನ್ನು ಗುರುತಿಸಿದೆ.ಮಾಡಬೇಕಾದ ಕಾರ್ಯ ಇನ್ನು ಸಾಕಷ್ಟಿವೆ ಅವುಗಳನ್ನು ರಾಜ್ಯದ ಜನರ ಹಿತಕ್ಕಾಗಿ ಮಾಡಿ ಆಲದ ಮರವಾಗಿ ಬೆಳೆಯಲ್ಲಿ ಎಂದು ಶುಭ ಹಾರೈಸಿದ ಅವರು ರಾಹುಲ್ ಅವರಿಗೆ ಜನ ಸೇವೆ ಮಾಡಲು ಬಹಳಷ್ಟು ಅವಕಾಶಗಳಿಗೆ ಅವರು ಅದನ್ನು ಪರಿಪೂರ್ಣವಾಗಿ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ರಾಹುಲ್ ಜಾರಕಿಹೊಳಿ ಅವರು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸೇವೆ ಮಾಡುತ್ತಿದ್ದಾರೆ.
ಲಾಲಬಹದ್ದೂರ ಶಾಸ್ತ್ರಿ, ಮಹಾತ್ಮಾ ಗಾಂಧೀಜಿ ಅವರು ಹುಟ್ಟಿದ ಪುನ್ಯ ದಿನದಂದು ರಾಹುಲ್ ಜನಸಿದ್ದಾರೆ. ಹಾಗಾಗಿ
ಬಿದ್ದವರನ್ನು ಮೇಲೆ ಎತ್ತಿ ಹಿಡಿಯುವ ಕಾರ್ಯ ರಾಹುಲ್ ಮಾಡಬೇಕು ಎಂದು ಆಶಯ ವಕ್ತಪಡಿಸಿದ ಅವರು
ಜನನ ಮತ್ತು ಮರಣದ ಮಧ್ಯದಲ್ಲಿ ಮಾಡುವ ಸಮಾಜ ಸೇವೆ ಹಿರಿಯದಾಗಿದ್ದು, ಅದನ್ನು ರಾಹುಲ್ ಅವರು ತಂದೆ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮಾಡಿ ಸಮಾಜದಲ್ಲಿ ಸೈ ಎನಿಸಿಕೊಳ್ಳುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಅಭಿನವ ಮಹಾಸ್ವಾಮಿಗಳು, ಘಟಪ್ರಭಾ ಗುಬ್ಬಲಗುಡ್ಡ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬಾಗೋಜಿ ಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಕಪರಟ್ಟಿ-ಕಳ್ಳಿಗುದ್ದಿಯ ಬ್ರಹ್ಮಶ್ರೀ ಬಸವರಾಜ ಸ್ವಾಮೀಜಿ ಸೇರಿದಂತೆ ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು.
