RNI NO. KARKAN/2006/27779|Saturday, May 16, 2026
You are here: Home » breaking news » ಗೋಕಾಕ:ರಾಹುಲ್ ಟ್ರೋಫಿ : ಪೈನಲ್ ನಲ್ಲಿ ರಾಯಗಡ್ ವಿರುದ್ಧ ಸೋಲಾಪೂರ ತಂಡಕ್ಕೆ ಭರ್ಜರಿ ಜಯ

ಗೋಕಾಕ:ರಾಹುಲ್ ಟ್ರೋಫಿ : ಪೈನಲ್ ನಲ್ಲಿ ರಾಯಗಡ್ ವಿರುದ್ಧ ಸೋಲಾಪೂರ ತಂಡಕ್ಕೆ ಭರ್ಜರಿ ಜಯ 

ರಾಹುಲ್ ಟ್ರೋಫಿ : ಪೈನಲ್ ನಲ್ಲಿ ರಾಯಗಡ್ ವಿರುದ್ಧ ಸೋಲಾಪೂರ ತಂಡಕ್ಕೆ ಭರ್ಜರಿ ಜಯ

ಗೋಕಾಕ ಮೇ 16 : ಮಹಾರಾಷ್ಟ್ರದ ರಾಯಲ್ ಸಿ.ಸಿ. ಸೋಲಾಪೂರ ಕ್ರಿಕೆಟ್ ತಂಡವು ಶುಕ್ರವಾರದಂದು ರಾಹುಲ್ ಟ್ರೋಫಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಸಿಜನ್ -2 ಪೈನಲ್ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಪಾಂಡುರಂಗ ಸಿ.ಸಿ ರಾಯಗಡ್ ಉಸಮಾನ ಪಟೇಲ ನೇತೃತ್ವದ ತಂಡದ ಎದುರು 2 ರನ್ ಅಂತರದ ರೋಮಾಂಚನಕಾರಿ ಗೆಲುವು ಸಾಧಿಸಿದೆ. ಇಲ್ಲಿನ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ 2026ನೇ ಸಾಲಿನ ರಾಹುಲ್ ಟ್ರೋಫಿ ಸಿಜನ್ -2 ಫೈನಲ್‌ ಪಂದ್ಯದಲ್ಲಿ ರಾಯಗಡ್ ತಂಡವನ್ನು ಬಗ್ಗುಬಡಿಯುವ ಮೂಲಕ ಚೊಚ್ಚಲ ಬಾರಿಗೆ ರಾಹುಲ್ ಟ್ರೋಫಿ ಜಯಿಸಿ ಸಂಭ್ರಮಿಸಿದೆ.
ಗೆಲ್ಲಲು 73 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ರಾಯಗಡ್ ತಂಡಕ್ಕೆ ಸೋಲಾಪೂರ ತಂಡದ ಬಾಲರಗಳಾದ ಸಮೀರ ಬಿರಾದಾರ,ಪ್ರತಮೇಶ, ಅಶೀಶ ದಾಸ ಉತ್ತಮ ಬಾಲಿಂಗ ಪ್ರದರ್ಶನ ಮಾಡಿ ಕಟ್ಟಿ ಹಾಕಿದರು.
ಪಂದ್ಯದ ಕೊನೆಯ ಓವರನ ಕೊನೆಯ ಚಂಡಿನಲ್ಲಿ 3 ರನ್ ಬೇಗಿರುವಾಗ ಬ್ಯಾಟ್ಸಮನ್ ಕೆವಲ ಒಂದು ರನ ಪಡೆಯಲು ಮಾತ್ರ ಸಾಧ್ಯವಾಯಿತು. ಅತ್ಯಂತ ರೋಮಾಂಚನಕಾರಿ ನಡೆದ ಈ ಪಂದ್ಯದಲ್ಲಿ ಸೋಲಾಪೂರ ತಂಡ 2 ರನ್ ನಿಂದ ಪಂದ್ಯವನ್ನು ಗೆದ್ದುಕೊಂಡು ಟ್ರೋಫಿ ತನ್ನದಾಗಿಸಿಕೊಂಡಿತು.

ವಿಜೇತ ತಂಡಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತು ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅವರು ಪ್ರಶಸ್ತಿಗಳನ್ನು ವಿತರಿಸಿ ಶುಭ ಕೋರಿದರು.
ಪೈನಲ್ ಪಂದ್ಯ ಗೆದ್ದ ರಾಯಲ್ ಸಿ.ಸಿ ಸೋಲಾಪೂರ ತಂಡಕ್ಕೆ ಪ್ರಥಮ ಬಹುಮಾನದ ರೂಪದಲ್ಲಿ 3 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ ಮತ್ತು ಎರಡನೇ ಬಹುಮಾನ ಪಡೆದ ಪಾಂಡುರಂಗ ಸಿ.ಸಿ ರಾಯಗಡ್ ತಂಡಕ್ಕೆ ದ್ವಿತೀಯ ಬಹುಮಾನದ ರೂಪದಲ್ಲಿ 2 ಲಕ್ಷ ರೂ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ವಿತರಿಸಲಾಯಿತಲ್ಲದೆ‌ ಉತ್ತಮ ಬ್ಯಾಟ್ಸಮನ್, ಉತ್ತಮ ಬಾಲರ್, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಸೇರಿದಂತೆ ಅನೇಕ ವೈಯಕ್ತಿಕ ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಅಪ್ಪಸಾಬ ಕುಲಗೋಡೆ, ಸಂಘಟಕ ರಿಯಾಜ ಚೌಗಲಾ, ಡಾ.ಘೋಡಗೇರಿ, ಡಾ.ಗಿರೀಶ್ ಸೋನವಾಲಕರ, ಹನೀಫ ಶಾಬಾಶಖಾನ, ಸಂತೋಷ ಭಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: