RNI NO. KARKAN/2006/27779|Friday, October 17, 2025
You are here: Home » breaking news » ಬೆಳಗಾವಿ:1931 ನೇ ಮಾದರಿಯ ವಿಂಟೇಜ್ ಕಾರೆರಿದ ಪೌರಾಡಳಿತ ಸಚಿವ ಖಂಡ್ರೆ

ಬೆಳಗಾವಿ:1931 ನೇ ಮಾದರಿಯ ವಿಂಟೇಜ್ ಕಾರೆರಿದ ಪೌರಾಡಳಿತ ಸಚಿವ ಖಂಡ್ರೆ 

1931 ನೇ ಮಾದರಿಯ ವಿಂಟೇಜ್ ಕಾರೆರಿದ ಪೌರಾಡಳಿತ ಸಚಿವ ಖಂಡ್ರೆ

ಬೆಳಗಾವಿ ನ 17: ಇಂದು ಮುಂಜಾನೆ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ವೀಂಟೆಜ್ ಕಾರಿನಲ್ಲಿ ಸುವರ್ಣಸೌಧ ಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದರು ಸದಲಗಾ ಶಾಸಕ ಗಣೇಶ ಹುಕ್ಕೇರಿ ಅವರ 1931 ನೇ ಮಾದರಿಯ ವಿಂಟೇಜ್ ಕಾರಿನಲ್ಲಿ ನಗರದ ಸರ್ಕ್ಯೂಟ್ ಹೌಸನಿಂದ ಶಾಸಕ ಗಣೇಶ ಹುಕ್ಕೇರಿ ಅವರೊಂದಿಗೆ ಕಲಾಪ ವೀಕ್ಷಣೆಗೆ ಆಗಮಿಸಿದರು

ಸರ್ಕ್ಯೂಟ್ ಹೌಸನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಬಂದಿದ್ದ ಖಂಡ್ರೆ ಅಲ್ಲಿಯೇ ಹಾಜರಿದ್ದ ಎರಡು ವಿಂಟೇಜ್ ಕಾರುಗಳ ಪೈಕಿ ಹಳದಿ ಕಾರಿನಲ್ಲಿ ಶಾಸಕ ಗಣೇಶ್ ಹುಕ್ಕೇರಿ ಅವರೊಂದಿಗೆ ಆಗಮಿಸಿದರು. ಆ ನಂತರ ಇನೋವಾದಲ್ಲಿ ಆಗಮಿಸಿದ ಬಿಜೆಪಿ ಶಾಸಕ, ಮಾಜಿ ಸಚಿವ ಉಮೇಶ ಕತ್ತಿ ಹಳದಿ ಕಾರಿನ ಬಗ್ಗೆ ಪ್ರೀತಿ ವ್ಯಕ್ತಪಡಿಸಿ ಮಾಧ್ಯಮದವರೊಂದಿಗೆ ಹಾಸ್ಯ ಚಟಾಕೆಗೆ ಇಳಿದರು. ಬರಿರ್ರಿ ಬರಿರ್ರೀ ಪ್ರಕಾಶ ಹುಕ್ಕೇರಿ ಮೆರೆಯುತ್ತಿದ್ದಾರೆ ಎಂದು ಲಘು ಚಟಾಕೆ ಹಾರಿಸಿದರು

Related posts: