ಗೋಕಾಕ:ಶೋಷಿತರ ಏಳ್ಗೆಗಾಗಿ ಡಾ.ಬಾಬು ಜಗಜೀವನರಾಮ್ ಅವರು ಹಲವಾರು ಕೋಡುಗೆಗಳನ್ನು ನೀಡಿದ್ದಾರೆ : ಗಸ್ತೆ

ಶೋಷಿತರ ಏಳ್ಗೆಗಾಗಿ ಡಾ.ಬಾಬು ಜಗಜೀವನರಾಮ್ ಅವರು ಹಲವಾರು ಕೋಡುಗೆಗಳನ್ನು ನೀಡಿದ್ದಾರೆ : ಗಸ್ತೆ
ಗೋಕಾಕ ಎ 5 : ಶೋಷಿತರ ಏಳ್ಗೆಗಾಗಿ ಶ್ರಮಮಿಸುತ್ತಾ ದೇಶಕ್ಕೆ ಹಲವಾರು ಕೋಡುಗೆಗಳನ್ನು ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರು ನೀಡಿದ್ದಾರೆ ಎಂದು ತಾಪಂ ಅಧಿಕಾರಿ ಪರಶುರಾಮ ಗಸ್ತೆ ಹೇಳಿದರು.
ರವಿವಾರದಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಆಡಳಿತ,. ತಾಲೂಕು ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನರಾಮ್ ರವರ 119ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕವಾಗಿ,ಸಮಾಜಿಕವಾಗಿ, ದುರ್ಬಲವಾದರವನ್ನು ಸಮಾಜದ ಮುಂಚೂಣಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.ದೇಶದ ಆಹಾರ ಸಮಸ್ಯೆಯನ್ನು ಪರಿಸರಿ ಹಸಿರು ಕ್ರಾಂತಿ ಹರಿಕಾರರಾದವರು. ಪತ್ರಿದಿನ ,ಪ್ರತಿಕ್ಷಣ ಡಾ.ಬಾಬು ಜಗಜೀವನರಾಮ ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶೋಷಿತರ ಧ್ವನಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ ಡಾ.ಮೋಹನ ಭಸ್ಮೆ ವಹಿಸಿದ್ದರು.
ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ವ್ಹಿ.ಬಿ.ಕಣಿಲ್ದಾರ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ರವಿ ರಂಗಸುಭೆ, ಸಮಾಜ ಕಲ್ಯಾಣ ಅಧಿಕಾರಿ ಎ.ಬಿ.ಮಲಬನ್ನವರ, ಸಿಡಿಪಿಓ ಡಾ ಡಿ.ಎಸ್.ಕೂಡವಕ್ಕಲಿಗ, ಬಿಇಓ ಜಿ.ಬಿ.ಬಳಗಾರ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪ್ರಮೀಳಾ ಬೀದರಿ, ತೋಟಗಾರಿಕೆ ಅಧಿಕಾರಿ ಎಂ.ಎಲ್ ಜನ್ಮಟ್ಟಿ, ಮುಖಂಡರುಗಳಾದ ಓಂಕಾರ ಬಂಡಿವಡ್ಡರ, ಅಜಿತ್ ಹರಿಜನ, ಗೋವಿಂದ ಕಳ್ಳಿಮನಿ, ವೀರಭದ್ರಪ್ಪ ಮೈಲನ್ನವರ, ಸುಂದರವ್ವ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
