ಗೋಕಾಕ:ಕಾಯಕ, ದಾಸೋಹ ಮತ್ತು ಸಮಾನತೆ ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ : ಶಿಕ್ಷಕ ಆರ್.ಎಲ್.ಮಿರ್ಜಿ

ಕಾಯಕ, ದಾಸೋಹ ಮತ್ತು ಸಮಾನತೆ ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ : ಶಿಕ್ಷಕ ಆರ್.ಎಲ್.ಮಿರ್ಜಿ
ಗೋಕಾಕ ಫೆ 10 : 12ನೇ ಶತಮಾನದ ವಚನಕಾರರು ಹೇಳಿಕೊಟ್ಟ ಕಾಯಕ, ದಾಸೋಹ ಮತ್ತು ಸಮಾನತೆ ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಂದು ಶಿಕ್ಷಕ ಆರ್.ಎಲ್.ಮಿರ್ಜಿ ಹೇಳಿದರು.
ಮಂಗಳವಾರದಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ಗೋಕಾಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾಯಕ ಶರಣರ ( ವಚನಕಾರರ) ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶರಣರು ಕಾಯಕಕ್ಕೆ ಸಾಕಷ್ಟು ಮಹತ್ವವನ್ನು ಕೊಟ್ಟಿದ್ದಾರೆ ಹಾಗಾಗಿ ನಾವೆಲ್ಲರೂ ಕಾಯಕದೋಳಗೆ ಕೈಲಾಸ ಕಾಣಬೇಕು.ಶರಣ ಜೀವನದ ಇತಿಹಾಸ ಎಂದರೆ ಸಮುದ್ರ ಇದ್ದಹಾಗೆ ಅವರ ಆದರ್ಶಗಳನ್ನು ನಾವು ಈ ಯುಗದಲ್ಲಿ ಪಾಲಿಸಿಕೊಂಡು ಬರಬೇಕು. ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದೆ,ಸಮಗಾರ ಹರಳಯ್ಯ ನವರ ಬಸವಣ್ಣನವರ ಸಮಕಾಲಿನ ಶಿವಶರಣರು ಕಾಯಕನಿಷ್ಠೆ ಮತ್ತು ಜಾತಿರಹಿತ ಸಮುದಾಯವನ್ನು ಕಟ್ಟಿದ್ದಾರೆ. ಅವರ ಬದುಕಿದ ಹಾಗೆ ನಾವು ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ತಮ್ಮ ಮಕ್ಕಳಿಗೆ ಶರಣರ ಬದುಕನ್ನು ಹೇಳಿಕೊಡುವ ಅವಶ್ಯಕತೆ ಇದೆ ಆ ನಿಟ್ಟಿನಲ್ಲಿ ತಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಸಮಾಜ ನಾವು ಯಾವ ಸಮುದಾಯದಲ್ಲಿ ಹುಟ್ಟಿದ್ದೇವೆ ಎಂಬುದನ್ನು ನೋಡುವುದಿಲ್ಲ ಬದಲಾಗಿ ಯಾವ ಸತ್ಕಾರ್ಯಗಳನ್ನು ಮಾಡಿದ್ದೇವೆ ಎಂಬುದನ್ನು ಗಮನಿಸುತ್ತದೆ ಆ ರೀತಿ ಬಾಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕಲಾವಿದರನ್ನು ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಮಲಬನ್ನವರ, ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ, ಎಲ್.ಕೆ.ತೊರಣಗಟ್ಟಿ, ಕೆ.ಎಸ್.ಆರ್.ಟಿ.ಸಿಯ ಅಮರ ಲಂಗೋಟ್ಟಿ, ಮುಖಂಡರುಗಳಾದ ಗೋವಿಂದ ಕಳ್ಳಿಮನಿ, ವೀರಭದ್ರ ಮೇಲನ್ನವರ, ಅಜಿತ ಹರಿಜನ, ಓಂಕಾರಪ್ಪ ಬಂಡಿವಡ್ಡರ,ಶ್ರೀಮತಿ ಸುಂದ್ರವ್ವ ಕಟ್ಟಿಮನಿ, ಶ್ರೀಮತಿ ರುಕ್ಕಮವ್ವ ಕುದರಿ, , ಭರಮಣ್ಣ ಗಾಡಿವಡ್ಡರ, ಶ್ರೀಮತಿ ಗೀತಾ ಸಣ್ಣಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
