RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಎಸ್.ಎಸ್. ಆವಾರ್ಡ್ಸ : ನಂದಗಾಂವದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ನವ್ಯಾ ಪಾಟೀಲ ತಂಡ ಪ್ರಥಮ

ಗೋಕಾಕ:ಎಸ್.ಎಸ್. ಆವಾರ್ಡ್ಸ : ನಂದಗಾಂವದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ನವ್ಯಾ ಪಾಟೀಲ ತಂಡ ಪ್ರಥಮ 

ಎಸ್.ಎಸ್. ಆವಾರ್ಡ್ಸ : ನಂದಗಾಂವದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ನವ್ಯಾ ಪಾಟೀಲ ತಂಡ ಪ್ರಥಮ


ಗೋಕಾಕ ಜ 17 : ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22ನೇ ಸತೀಶ ಶುಗರ್ಸ ಅವಾಡ್ರ್ಸನ ಪ್ರಥಮ ದಿನ ನಡೆದ ಸ್ಫರ್ಧೆಗಳ ಫಲಿತಾಂಶ.
ಪ್ರಾಥಮಿಕ ವಿಭಾಗದ ಭಾಷಣ ಸ್ಫರ್ಧೆಯಲ್ಲಿ ನಂದಗಾಂವದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ನವ್ಯಾ ಪಾಟೀಲ ಪ್ರಥಮ, ಮೆಳವಂಕಿಯ ಪಿಎಮ್‍ಶ್ರೀ ಕೆಎಚ್‍ಪಿಎಸ್ ಸಿದ್ಧಾರೂಢ ಮಠ ಶಾಲೆಯ ಭಾರತಿ ಚಿಪ್ಪಲಕಟ್ಟಿ ದ್ವಿತೀಯ, ಶಿವಾಪೂರದ ಕೆಎಚ್‍ಪಿಎಸ್ ಮದಲಮಟ್ಟಿ ತೋಟದ ಶಾಲೆಯ ಮಾನಸಾ ತ್ಯಾಪಿ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರೌಢ ಶಾಲಾ ವಿಭಾಗದ ಭಾಷಣ ಸ್ಫರ್ಧೆಯಲ್ಲಿ ಮೆಳವಂಕಿ ಪಿಎಮ್‍ಶ್ರೀ ಕೆಎಚ್‍ಪಿಎಸ್ ಸಿದ್ಧಾರೂಢ ಮಠ ಶಾಲೆಯ ಕೀರ್ತಿ ಮುತವಾಡ ಪ್ರಥಮ, ಯಾದವಾಡದ ಜಿಎನ್‍ಎಸ್ ಪ್ರೌಢ ಶಾಲೆಯ ರಂಜಿತಾ ರೂಗಿ ದ್ವಿತೀಯ, ಗೋಕಾಕನ ಕೆಎಲ್‍ಇ ಎಮ್‍ಎಮ್ ಸಿಬಿಎಸ್‍ಇ ಶಾಲೆಯ ಮಹ್ಮದಜಿಹಾನ ತೃತೀಯ ಸ್ಥಾನ ಪಡೆದಿದ್ದಾರೆ.
ಬೆಳಗಾವಿ ಜಿಲ್ಲಾ ಮಟ್ಟದ ಕಾಲೇಜು ವಿಭಾಗ ಭಾಷಣ ಸ್ಫರ್ಧೆಯಲ್ಲಿ ಗೋಕಾಕನ ಕೆಎಲ್‍ಇ ಸಿ ಎಸ್ ಅಂಗಡಿ ಕಾಲೇಜಿನ ನೀಲಾವತಿ ಹಂಜಿ ಪ್ರಥಮ, ಕೋಥಳಿಯ ಜವಾಹರಲಾಲ ನವೋದಯ ಮಹಾವಿದ್ಯಾಲಯದ ಐಶ್ವರ್ಯಾ ಕೋಡ್ಲಿ ದ್ವಿತೀಯ, ಗೋಕಾಕನ ಜಿಇಎಸ್ ಬಿಈಡಿ ಮಹಾವಿದ್ಯಾಲಯದ ಸ್ವಾತಿ ಗುರಾಯಿ ತೃತೀಯ ಸ್ಥಾನ ಪಡೆದಿದ್ದಾರೆ. ಜಿಲ್ಲಾ ಮಟ್ಟದ ಕಾಲೇಜು ಸಮೂಹ ನೃತ್ಯ ಸ್ಫರ್ಧೆಯಲ್ಲಿ ಗೋಕಾಕನ ಜಿಎಫ್‍ಜಿಸಿ ಕಾಲೇಜು ತಂಡ ಪ್ರಥಮ, ಕಲ್ಲೋಳಿಯ ಎನ್ ಆರ್ ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದ ತಂಡ ದ್ವಿತೀಯ, ಗೋಕಾಕನ ಎಸ್ ಎಸ್ ಎ ಪದವಿ ಪೂರ್ವ ಕಾಲೇಜು ತಂಡ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರೌಢಶಾಲಾ ವಿಭಾಗದ ಜನಪದ ಗಾಯನ ಸ್ಫರ್ಧೆಯಲ್ಲಿ ಗೋಕಾಕನ ಶೇಫರ್ಡ ಮಿಷನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ರಾಘವೇಂದ್ರ ಖಾನಪ್ಪನವರ ಪ್ರಥಮ, ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪ್ರೌಢ ಶಾಲೆಯ ರಾಜಶೇಖರ ಚಿಗಡೊಳ್ಳಿ ದ್ವಿತೀಯ, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಶಾಲೆಯ ರಾಣಿ ಪೋಳ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಾಥಮಿಕ ವಿಭಾಗದ ಗಾಯನ ಸ್ಫರ್ಧೆಯಲ್ಲಿ ಗೋಕಾಕನ ಕೆಎಲ್‍ಇ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಧೃತಿ ಚಿಗದನ್ನವರ ಪ್ರಥಮ, ಚನ್ನಬಸವೇಶ್ವರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಖುಷಿ ಶಿಂಗಳಾಪೂರ ದ್ವಿತೀಯ, ಗೋಕಾಕ ಫಾಲ್ಸ್‍ನ ಫೋಬ್ರ್ಸ ಅಕಾಡೇಮಿ ಹಿರಿಯ ಪ್ರಾಥಮಿಕ ಶಾಲೆಯ ವೈಭವ ಕಲಬುರ್ಗಿ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಾಥಮಿಕ ವಿಭಾಗದ ಸಮೂಹ ನೃತ್ಯ ಸ್ಫರ್ಧೆಯಲ್ಲಿ ಮಲ್ಲಾಪೂರ ಪಿಜಿಯ ಶ್ರೀ ಶಿವಾನಂದ ಮಹಾಸ್ವಾಮಿ ಕನ್ನಡ ಮಾಧ್ಯಮ ಶಾಲೆಯ ತಂಡ ಪ್ರಥಮ, ಘಟಪ್ರಭಾದ ಮ.ಪಖೇಮಲಾಪೂರೆ ಹಿರಿಯ ಪ್ರಾಥಮಿಕ ಶಾಲಾ ತಂಡ ದ್ವಿತೀಯ, ಗೋಕಾಕನ ಜ್ಞಾನ ಗಂಗೋತ್ರಿ ಹಿರಿಯ ಪ್ರಾಥಮಿಕ ತಂಡ ತೃತೀಯ ಸ್ಥಾನ ಪಡೆದಿದ್ದಾರೆ.
ಭಾಷಣ, ಗಾಯನ, ಜನಪದ ಗಾಯನ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ 15ಸಾವಿರ, ದ್ವಿತೀಯ 10ಸಾವಿರ, ತೃತೀಯ 7ಸಾವಿರ, ಪ್ರಾಥಮಿಕ ಶಾಲಾ ವಿಭಾಗದ ಸಮೂಹ ನೃತ್ಯ ವಿಭಾಗದಲ್ಲಿ ಪ್ರಥಮ 50ಸಾವಿರ, ದ್ವಿತೀಯ 30ಸಾವಿರ, ತೃತೀಯ 20ಸಾವಿರ, ಜಿಲ್ಲಾ ಮಟ್ಟದ ಕಾಲೇಜು ಸಮೂಹ ನೃತ್ಯದಲ್ಲಿ ಪ್ರಥಮ 60ಸಾವಿರ, ದ್ವಿತೀಯ 40ಸಾವಿರ, ತೃತೀಯ 30ಸಾವಿರ ರೂಗಳ ಬಹುಮಾನದ ಜೊತೆಗೆ ಟ್ರೋಫಿ ನೀಡಲಾಯಿತು.
ಈ ಸಂದರ್ಭದಲ್ಲಿ ತಹಶೀಲದಾರ ಡಾ.ಮೋಹನ ಭಸ್ಮೆ, ಬಿಇಓ ಪ್ರಕಾಶ ಹಿರೇಮಠ, ಡಿ.ವಾಯ.ಎಸ್.ಪಿ ರವಿ ನಾಯಿಕ, ಸಿಪಿಐಗಳಾದ ಸುರೇಶಬಾಬು, ಶ್ರೀಶೈಲ ಬ್ಯಾಕೂಡ, ಜಾವೇದ ಮುಸಾಪೂರೆ, ಎಚ್ ಡಿ ಮುಲ್ಲಾ, ಪಿಎಸ್‍ಐಗಳಾದ ಕಿರಣ ಮೊಹಿತೆ, ಕೆ ಬಿ ವಾಲಿಕಾರ, ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ, ಸತೀಶ ಶುಗರ್ಸನ ಪಿ ಡಿ ಹಿರೇಮಠ, ಪ್ರಾಚಾರ್ಯ ಪ್ರಕಾಶ್ ಲಕ್ಷಟ್ಟಿ, ರಿಯಾಜ ಚೌಗಲಾ ಸೇರಿದಂತೆ ಗಣ್ಯರು ಇದ್ದರು.

Related posts: