RNI NO. KARKAN/2006/27779|Tuesday, January 27, 2026
You are here: Home » breaking news » ಬೆಳಗಾವಿ:ಚಳಿಗಾಲದ ಅಧಿವೇಶನ | ಬೆಳಗಾವಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ

ಬೆಳಗಾವಿ:ಚಳಿಗಾಲದ ಅಧಿವೇಶನ | ಬೆಳಗಾವಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ 

ಚಳಿಗಾಲದ ಅಧಿವೇಶನ | ಬೆಳಗಾವಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ
ಬೆಳಗಾವಿ ಡಿ 8: ಬೆಳಗಾವಿಯಲ್ಲಿ ಇಂದು ಆರಂಭವಾಗುತ್ತಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಗುಂಪು ಮಹಾಮೇಳ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ, ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಸಂಭಾಜಿ ವೃತ್ತದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದು, ಎಂಇಎಸ್ ಕಾರ್ಯಕರ್ತರು ನಗರ ಪ್ರವೇಶಿಸಲು ಯತ್ನಿಸಿದ ಕ್ಷಣ ವಶಕ್ಕೆ ಪಡೆಯುವಂತೆ ಸೂಚಿಸಲಾಗಿದೆ. ನಗರದಲ್ಲಿ ಖಡೇಬಜಾರ್, ಕ್ಯಾಂಪ್, ಟಿಳಕವಾಡಿ ಮತ್ತು ಮಾರುಕಟ್ಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ.
ಬೆಳಗಾವಿ–ನಿಪ್ಪಾಣಿ ಗಡಿಯಲ್ಲಿ ಕೂಡಾ ಬಿಗಿ ಪೊಲೀಸ್ ಬಂದೋಬಸ್ತ್ ಜಾರಿಯಲ್ಲಿದ್ದು, ಹೊರ ರಾಜ್ಯದಿಂದ ಪ್ರವೇಶಿಸುವವರ ಮೇಲೆ ನಿಗಾವಹಿಸಲಾಗುತ್ತಿದೆ. ಅಧಿವೇಶನ ಶುರುವಿನ ಮೊದಲ ದಿನವೇ ನಗರದಲ್ಲಿ ಕಠಿಣ ಭದ್ರತಾ ವಲಯ ನಿರ್ಮಾಣಗೊಂಡಿದ್ದು, ಪೊಲೀಸರು ಸಂಪೂರ್ಣ ಸಿದ್ಧತೆಯಲ್ಲಿ ನಿಂತಿದ್ದಾರೆ.

Related posts: