ಗೋಕಾಕ:ನಿಯಮ ಉಲ್ಲಂಘನೆ ಶೇ.50 ರಿಯಾಯಿತಿ

ನಿಯಮ ಉಲ್ಲಂಘನೆ ಶೇ.50 ರಿಯಾಯಿತಿ
ಗೋಕಾಕ ನ 25 : ಸಾರಿಗೆ ಇಲಾಖೆ 1991-92 ರಿಂದ 2019-20 ಮೋಟಾರು ವಾಹನ ಕಾಯಿದೆ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ಡಿಎಸ್ಎ ಇಲಾಖಾ ಶಾಸನ ಪ್ರಕರಣಗಳ ದಂಡಕ್ಕೆ 50ರ ರಿಯಾಯಿತಿ ನೀಡಿದೆ. ಡಿಸೆಂಬರ್ 12ರವರೆಗೆ ವಾಹನ ಮಾಲಿಕರು ದಂಡ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಾಹನ ಮಾಲಿಕರು ಈ ಸವಲತ್ತಿನ ಸದುಪಯೋಗ ಪಡೆದುಕೊಳ್ಳುವಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕರ ಕೆ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
