ಗೋಕಾಕ:ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಾಜ್ಯ ಉಪಾಧ್ಯಕ್ಷರಾಗಿ ಜೈನುಲ್ಲಾ ಅಂಕಲಗಿ ಆಯ್ಕೆ

ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಾಜ್ಯ ಉಪಾಧ್ಯಕ್ಷರಾಗಿ ಜೈನುಲ್ಲಾ ಅಂಕಲಗಿ ಆಯ್ಕೆ
ಗೋಕಾಕ ನ 24 : ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಿ.ಬೆಂಗಳೂರು ಇದರ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಇಲ್ಲಿನ ಹಿರಿಯ ಪತ್ರಕರ್ತ ಜೈನುಲ್ಲಾ ಅಂಕಲಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬೆಳಗಾವಿಯ ರಾಜಶೇಖರ ಕೆ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸಂದೀಪ್ ಮೆಣಸಿನಕಾಯಿ ಅವರು ಆಯ್ಕೆಮಾಡಲಾಯಿತು.
ನಗರದಲ್ಲಿ ರಾಜ್ಯಾಧ್ಯಕ್ಷ ಅಶೋಕ್ ಭಜಂತ್ರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು.
ಬೆಳಗಾವಿ ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ಪ್ರಕಾಶ ಕೆಳಗಿನಮನಿ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಶಶಿ ಕನ್ನಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರಾಮು ಮರೆನ್ನವರ, ಜಿಲ್ಲಾ ಉಪಾಧ್ಯಕ್ಷರಾಗಿ ಅಪ್ಪಣ್ಣ ಅಗಸರ, ಜಿಲ್ಲಾ ಖಜಾಂಚಿಯಾಗಿ ವಿಶ್ವನಾಥ ಚಿಕ್ಕಮಠ ಇವರನ್ನು ಆಯ್ಕೆ ಮಾಡಲಾಯಿತು.
