ಗೋಕಾಕ:ಸಂತರ ತತ್ವಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೋಳ್ಳಿ : ಮುರುಘರಾಜೇಂದ್ರ ಶ್ರೀ
ಸಂತರ ತತ್ವಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೋಳ್ಳಿ : ಮುರುಘರಾಜೇಂದ್ರ ಶ್ರೀ
ಗೋಕಾಕ ನ 10: ಸಂತರ ತತ್ವಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಾತ್ಯತೀತವಾಗಿ ಬಾಳಬೇಕೆಂದು ಶೂನ್ಯ ಸಂಪಾದನಾ ಮಠದ ಮ.ನಿ.ಪ್ರ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು
ಅವರು ತಾಲೂಕಾಡಳಿತ , ತಾಲೂಕಾ ಪಂಚಾಯತ್ , ನಗರಸಭೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ತಾ.ಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಜರತ ಟಿಪ್ಪು ಸುಲ್ತಾನ್ ರವರ ಜಯಂತಿ ಉತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು
ಧರ್ಮವನ್ನು ಮೀರಿ ಬಾಳಿ ಬದುಕಿದ ಕೀರ್ತಿ ಟಿಪ್ಪು ಸುಲ್ತಾನ್ ಅವರಿಗೆ ಸಲ್ಲುತ್ತದೆ ದೇಶಕ್ಕಾಗಿ ತಮ್ಮ ಜೀವನವನ್ನು ಮೂಡಿಪಾಗಿಟ್ಟುಕೊಂಡು ಹೋರಾಟ ಮಾಡಿದ ಮಾಹಾನಭಾವರನ್ನು ನೆನೆಯುವ ಕಾರ್ಯಗಳು ಒಗ್ಗಟ್ಟಿನಿಂದ ನಡೆಯಬೇಕಾಗಿದೆ ಆ ದೀಸೆಯಲ್ಲಿ ನಾವೆಲ್ಲರೂ ಮುಂದಾಗಬೇಕಾಗಿದೆ ಎಂದು ಶ್ರೀಗಳು ಹೇಳಿದರು
ಶಿಕ್ಷಕ ಟಿ .ಬಿ.ಬಿಲ್ಲ ಮತ್ತು ಎಸ್.ಎಂ.ಪೀರಜಾದೆ ಅವರು ಟಿಪ್ಪುವಿನ ಕುರಿತು ವಿಶೇಷ ಉಪನ್ಯಾಸ ನೀಡಿದರು
ವೇದಿಕೆ ಮೇಲೆ ತಹಶೀಲ್ದಾರ್ ಜಿ.ಎಸ್ . ಮಾಳಗಿ , ತಾ.ಪಂ ಕಾರ್ಯನಿರ್ವಾಹಕ ಎಂ.ಜಿ.ಚಿನ್ನನವರ , ಅಧಿಕಾರಿ ನಗರ ಸಭೆ ಅಧ್ಯಕ್ಷ ತಳದಪ್ಪಾ ಅಮ್ಮಣಗಿ , ಎಸ. ಎ ಕೋತವಾಲ , ಮೋಲಾನಾ ಬಶೀರುಲ್ಲಹಕ್ಕ , , ಮೌಲಾನಾ ಜಿ.ಬಿ.ಮುಲ್ಲಾ , ಸಿಪಿಐ ತವನಪ್ಪಗೋಳ , ತಾ.ಪಂ ಉಪಾಧ್ಯಕ್ಷ ಯಲ್ಲಪ ನಾಯಿಕ , ಜಿ.ಬಿ.ಬಳಗಾರ , ಕೆ.ಬಿ.ಸಣ್ಣಕ್ಕಿ , ಕುತಬುದ್ದೀನ ಗೋಕಾಕ , ಎಸ್.ಕೆ ನಾಗನ್ನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ತಾಲೂಕಾಡಳಿತದ ಪರವಾಗಿ ಸತ್ಕರಿಸಿ ಗೌರವಿಸಲಾಯಿತು , ಇದೇ ಸಂದರ್ಭದಲ್ಲಿ ಇಂಧನ ಇಲಾಖೆಯಿಂದ ಪಾವರ ಆರ್ವಾಡ್ಸ ಪಡೆದ ಇಲಾಖೆಯ ಎಸ್.ಕೆ. ನಾಗನ್ನವರ , ಕೆ.ಬಿ. ಸಣ್ಣಕ್ಕಿ ಅವರನ್ನು ಸಹ ಸತ್ಕರಿಸಿ ಗೌರವಿಸಲಾಯಿತು
ಕಾರ್ಯಕ್ರವನ್ನು ಎಸ್.ಎಂ .ಜನ್ಮಟ್ಟಿ ನಿರೂಪಿಸಿದರು ಕೊನೆಯಲ್ಲಿ ವಿಜಯ ಸುಲೇಗಾಂವಿ ವಂದಿಸಿದರು