ಗೋಕಾಕ:ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದ ಮಳಿಗೆಗಳನ್ನು ಉದ್ಘಾಟಿಸಿದ ಶಾಸಕ ರಮೇಶ ಜಾರಕಿಹೊಳಿ

ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದ ಮಳಿಗೆಗಳನ್ನು ಉದ್ಘಾಟಿಸಿದ ಶಾಸಕ ರಮೇಶ ಜಾರಕಿಹೊಳಿ
ಗೋಕಾಕ ಜು 1 : ಗ್ರಾಮ ದೇವತೆ ಜಾತ್ರಾ ನಿಮಿತ್ಯವಾಗಿ ತಾಲೂಕ ಪಂಚಾಯತ ಗೋಕಾಕ ಆಯೋಜಿಸಿದ ಬೆಳಗಾವಿ ಜಿಲ್ಲೆಯ ಎನ್.ಆರ್.ಎಲ್.ಎಮ್ ಸಂಜೀವಿನಿ ಸಂಘಗಳು ತಯಾರಿಸಿದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದ ಮಳಿಗೆಗಳನ್ನು ಶಾಸಕ ಹಾಗೂ ಶ್ರೀ ಮಹಾಲಕ್ಷ್ಮೀದೇವಿ ಜಾತ್ರಾ ಕಮೀಟಿಯ ಅಧ್ಯಕ್ಷರಾದ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸಿದರು.
ನಂತರ ಸಂಜೀವಿನಿ ಸಂಘಗಳು ತಯಾರಿಸಿದ ವಸ್ತುಗಳನ್ನು ವೀಕ್ಷಣೆ ಮಾಡಿ ಮಾಹಿತಿ ಪಡೆದು ಖರೀದಿ ಮಾಡುವ ಮೂಲಕ ಪೆÇ್ರೀತ್ಸಾಹಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪಿ ಎಮ್ ಘಸ್ತೆ, ಶಿಶು ಅಭಿವೃದ್ಧಿ ಅಧಿಕಾರಿಗಳಾದ ಡಿ ಎಸ್ ಕುಡ್ದವಕ್ಕಲಗಿ, ಯಲ್ಲಪ್ಪ ಗದಾಡಿ ವಿವಿಧ ಗ್ರಾಪಂಗಳ ಪಂಚಾಯತ ಅಭಿವೃದ್ಧಿ ಅಧಿಕಾರಗಳು, ತಾಲೂಕ ಪಂಚಾಯತ ಗೋಕಾಕ ಸಿಬ್ಬಂದಿಗಳು, ಏನ್.ಆರ್.ಎಲ್.ಎಮ್ ಗೋಕಾಕ ಸಿಬ್ಬಂದಿಗಳು, ಒಕ್ಕೂಟದ ಸಿಬ್ಬಂದಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.