ಗೋಕಾಕ:ರಾಷ್ಟ್ರೀಯ ಹ್ಯಾಂಡಬಾಲ್ ಕ್ರೀಡಾಕೂಟದಲ್ಲಿ ಕೆಎಲ್ಇ ಶಾಲೆಗೆ ಪ್ರಥಮ ಸ್ಥಾನ : ಆಡಳಿತ ಮಂಡಳಿ ಹರ್ಷ
ರಾಷ್ಟ್ರೀಯ ಹ್ಯಾಂಡಬಾಲ್ ಕ್ರೀಡಾಕೂಟದಲ್ಲಿ ಕೆಎಲ್ಇ ಶಾಲೆಗೆ ಪ್ರಥಮ ಸ್ಥಾನ : ಆಡಳಿತ ಮಂಡಳಿ ಹರ್ಷ
ಗೋಕಾಕ ನ 4 : ಇತ್ತೀಚಿಗೆ ದೆಹಲಿಯಲ್ಲಿ ನಡೆದ 17 ವರ್ಷದೊಳಗಿನ ಹೆಣ್ಣುಮಕ್ಕಳ ರಾಷ್ಟ್ರೀಯ ‘ಹ್ಯಾಂಡಬಾಲ್’2017 ರ ಕ್ರೀಡಾಕೂಟದಲ್ಲಿ ದೆಹಲಿಯ ಹೀರಾಲಾಲ್ ಪಬ್ಲಿಕ್ ಸ್ಕೂಲ್ ತಂಡವನ್ನು 1 ಗೋಲಿನ ಅಂತರದಲ್ಲಿ ಸೋಲಿಸಿ ಗೋಕಾಕ ನಗರದ ಕೆ.ಎಲ್.ಇ. ಸಂಸ್ಥೆಯ ಮಹಾದೇವಪ್ಪಾ ಮುನವಳ್ಳಿ ಶಾಲೆಯ ಮಕ್ಕಳು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರಿ ಅವರು ಟ್ರೋಫಿಯನ್ನು ವಿತರಿಸಿದ್ದು, ಋತ್ವಿಕಾ ಕೊಳಗಿ ಅತ್ಯುತ್ತಮ ಆಟಗಾರ್ತಿ ಎಂದು ಹಾಗೂ ಸ್ನೇಹಲ್ ಬಗಾಡೆ ಅತ್ಯುತ್ತಮ ಗೋಲ್‍ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ದೈಹಿಕ ಶಿಕ್ಷಕ ಸುರೇಶ ಚನ್ನಾಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
