ಮೂಡಲಗಿ:ಫೇಸ್‍ಬುಕ್ ಬಳಸುವ ಭರದಲ್ಲಿ ಭಾಂಧವ್ಯ ಕಳೆದು ಕೊಳ್ಳುತ್ತಿರುವದು ವಿಷಾದನೀಯ : ಡಾ: ಸಬಿಹಾ ಭೂಮಿಗೌಡ
ಫೇಸ್‍ಬುಕ್ ಬಳಸುವ ಭರದಲ್ಲಿ ಭಾಂಧವ್ಯ ಕಳೆದು ಕೊಳ್ಳುತ್ತಿರುವದು ವಿಷಾದನೀಯ : ಡಾ: ಸಬಿಹಾ ಭೂಮಿಗೌಡ
ಮೂಡಲಗಿ ಅ 29: ಈಗಿನ ವಿದ್ಯಾರ್ಥಿಗಳು ಫೇಸ್‍ಬುಕ್ ಮುಖಾಂತರ ಮುಖವಿಲ್ಲದವರನ್ನು ಪರಿಚಯ ಮಾಡಿಕೊಳ್ಳುವ ಭರಾಟೆಯಲ್ಲಿ ಅಕ್ಕ ಪಕ್ಕ ಮನೆಯವರ ಭಾಂಧವ್ಯ ಕಳೆದು ಕೊಳ್ಳುತ್ತಿರುವದು ವಿಷಾದನೀಯ. ಅಂಕಗಳ ಬೇಟೆ, ಕಲಿಕೆಯ ಒತ್ತಡದಲ್ಲಿ ಯುವಕರು ಸೃಜನಶೀಲತೆ ಮತ್ತು ಸಂಸ್ಕಂತಿಯಿಂದ ವಿಮುಖರಾಗುತ್ತಿದ್ದಾರೆ ವಿಜಯಪೂರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಡಾ: ಸಬಿಹಾ ಭೂಮಿಗೌಡ ಹೇಳಿದರು.
ಅವರು ಶನಿವಾರದಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅರಭಾಂವಿ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ ಆಶ್ರಯದಲ್ಲಿ ಬಸವೇಶ್ವರ ಕಲ್ಯಾಮಂಟಪದಲ್ಲಿ ಜರುಗಿದ ತೋಟಗಾರಿಕೆ ಮಹಾವಿದ್ಯಾಲಯಗಳ 9ನೇ ಅಂತರ ಕಾಲೇಜು ಯುವಜನೋತ್ಸವ-2017ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಧ್ಯಯನ, ಎಲ್‍ಕೆಜಿ ಯಿಂದ ಪದವಿಯವರೆಗೆ ಹೆಚ್ಚು ಅಂಕ ಪಡೆಯಬೆಕೆಂಬ ಹಂಬಲ ಈಗಿನ ವಿದ್ಯಾರ್ಥಿಗಳಲ್ಲಿ ಇದೆ. ಶಾಲೆ ಪ್ರಾರಂಭವಾಗುವದರಿಂದ ರಜೆ ದಿನಗಳಲಿಯೂ ವಿದ್ಯಾರ್ಥಿಗಳ ಅಂಕಗಳಿಗೆ ಕಟ್ಟು ಬಿದಿರುವದರಿಂದ ಗ್ರಾಮಿಣ ಕ್ರೀಡೆ, ಜನಪದ ಕಲೆಗಳು ಮರೆಯಾಗುತ್ತಲಿವೆ, ಜೀವ ಕಳೆಗಳನ್ನು ಯುವಜನೋತ್ಸವದ ಮೂಲಕ ವಿದ್ಯಾರ್ಥಿಗಳಲ್ಲಿ ತುಂಬವದರಿಂದ ಮತ್ತು ಅಂತರ ಕಾಲೇಜ ಮುಖಾ ಮುಖಿ ಮತ್ತು ಸಮನ್ವಯತೆ ತುಂಬುವದರಿಂದ ಯುವಜನೋತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರಾ ವಹಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಎಲ್.ಮಹೇಶ್ವರ ಮಾತನಾಡಿ, ತೋಟಗಾರಿಕೆ ಕಲಿತ ಮಹಿಳೆ ಸಮಾಜಕ್ಕೆ ಕಣ್ಣಾಗಿ ಬಾಳುತ್ತಾಳೆ, ಗ್ರಾಮೀಣ ಕ್ರೀಡೆಗಳನ್ನು ಹೋರತು ಪಡಿಸಿ ತೋಟಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಸಾಧಕರನ್ನು ಪೇರಣೆಯಾಗಿ ಇಟ್ಟುಕೊಂಡು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಬಹುದು. ಯುವಜನೋತ್ಸ ಕಾರ್ಯಕ್ರಮದ ಮೂಲಕ ಆತ್ಮಹತ್ಯೆಯಿಂದ ಆತ್ಮಸ್ಥೈರ್ಯದವರಿಗೆ ರೈತರನ್ನು ಕೊಂಡೋವುವಲ್ಲಿ ವಿದ್ಯಾರ್ಥಿಗಳು ಕಾರ್ಯೊನ್ಮೂಕವಾಗಬೇಕು. ರಾಜ್ಯದ ಪಿಡುಗುಗಳಾದ ಹಸಿವು, ಬಡತನ ಮತ್ತು ಅಪೌಷ್ಟಿಕತೆ ಕಿತ್ತೋಗಿಯಲು ಅನ್ನದಾತ ಒಬ್ಬನಿಂದಲ್ಲೇ ಸಾಧ್ಯ ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿದರ ಕುರೇರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿ ಮತ್ತು ಸಾಧನೆಯನ್ನು ಗಮನದಲ್ಲಿ ಇಟ್ಟುಕೊಂಡು ಉಜ್ವಲ ಭವಿಷ್ಯಕ್ಕಾಗಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಬಹುದು. ನಾಲ್ಕು ವರ್ಷ ತೋಟಗಾರಿಕಾ ಕಲಿಕೆಯಲ್ಲಿ ಸಾಕಷ್ಟು ಗಂಭಿರವಾದ ಸಾಧನೆಯನ್ನು ಹಾಸ್ಯ ಮತ್ತು ಕೇಕೆಗಳ ಮೂಲಕ ಕಳೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕೋಲಾರದ ಎಸ್.ಮಂಜುನಾಥಗೌಡ, ಕನಕಪೂರದ ಆರ್.ಎಮ್.ನಾಗೇಶ, ನಾಗೇಶ ನಾಯಕ, ಡಾ:ಸಿ.ಎಮ್.ಹಂಚಿನಮನಿ ಮಾತನಾಡಿದರು.
ವೇದಿಕೆಯಲ್ಲಿ ಕೆ.ಎಮ್.ಇಂದ್ರೇಶ್, ರವಿ ಚಂಡುಗೋಳ, ಶಂಕರ ಮಳಲಿ, ಡಾ: ಬಿ.ಜಿ.ಪ್ರಕಾಶ, ಡಾ: ಕೆ.ಉಮೇಶ, ಡಾ: ಎಚ್.ಬಿ.ಲಿಂಗಯ್ಯ, ಡಾ: ಎಚ್.ಬಿ.ಪಾಟೀಲ, ಡಾ: ಜನಾರ್ಧನ ಜಿ, ಡಾ: ಟಿ.ಬಿ.ಅಲ್ಲೋಳಿ, ಡಾ: ಕೆ.ಉಮೇಶ, ಡಾ: ಎಸ್.ಐ.ಅಥಣಿ, ಡಾ: ರವೀಂದ್ರ ಮಳಗೆ ಇದ್ದರು.
ತೋಟಗಾರಿಕಾ ಕಾಲೇಜಿನ ಡೀನ್ ಛಾಯಾ ಪಾಟೀಲ ಸ್ವಾಗತಿಸಿದರು. ಡಾ: ವಂದನಾ ವ್ಹಿ ಮತ್ತು ಡಾ: ಮಹಾಂತೇಶ ನಾಯ್ಕ, ನಿರೂಪಿಸಿದರು. ಡಾ: ಕಾಂತರಾಜು ವ್ಹಿ ವಂದಿಸಿದರು.