ಗೋಕಾಕ:ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು : ನರೇಂದ್ರ ಜೀ
ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು : ನರೇಂದ್ರ ಜೀ
ಗೋಕಾಕ ಅ 26: ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ಪ್ರಾಂತ ಕಾಲೇಜ ವಿದ್ಯಾರ್ಥಿ ಪ್ರಮುಖರಾದ ನರೇಂದ್ರ. ಜೀ ಕರೆ ನೀಡಿದರು.
ಅವರು ಗುರುವಾರದಂದು ಇಲ್ಲಿಯ ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ(ಬಿ.ಇಡಿ) ವತಿಯಿಂದ ಸನ್ 2016-17ನೇ ಸಾಲಿನ ಪೌರತ್ವ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಶಿಬಿರಾರ್ಥಿಗಳಲ್ಲಿ ಸಾಮಾಜಿಕ ಜೀವನ ನಡೆಸುವಂತೆ ಮತ್ತು ಪ್ರೇರೇಪಿಸುವಂತೆ ಮತ್ತು ಏಕತಾ ಭಾವನೆ ಮೂಡಿಸುವುದೇ ಶಿಬಿರದ ಉದ್ದೇಶವಾಗಿದೆ ಎಂದರು.
ಸಂಸ್ಥೆಯ ವಿಶ್ವಸ್ಥ ಮಂಡಳಿ ಚೇರಮನ್ ಗಂಗಪ್ಪಣ್ಣಾ ತಾಂವಶಿ ಸಸಿ ನೀರುನಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಆರ್.ಎಂ.ವಾಲಿ, ಪ್ರಭಾರಿ ಪ್ರಾಚಾರ್ಯ ವಿ.ವಿ.ಮೋದಿ ಇದ್ದರು. ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ಜರುಗಿತು. ಸಂಸ್ಥೆಯ ನಿರ್ದೇಶಕ ಪಿ.ಎಂ.ಕೋಲಾರ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ.ಕುದರಿ ಉಪನ್ಯಾಸ ನೀಡಿದರು. ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.