ಗೋಕಾಕ:ಎಮ್‍ಬಿಬಿಎಸ್ ಹಾಗೂ ಬಿಇ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ರಮೇಶ್
ಎಮ್‍ಬಿಬಿಎಸ್ ಹಾಗೂ ಬಿಇ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ರಮೇಶ್
ಗೋಕಾಕ ನ 9 : ತಾಲೂಕಿನ ಕೊಣ್ಣೂರು ಪುರಸಭೆಯಿಂದ ಎಮ್‍ಬಿಬಿಎಸ್ ಹಾಗೂ ಬಿಇ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾದ ಲ್ಯಾಪ್ ಟಾಪ್‍ಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಶನಿವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಕೊಣ್ಣೂರು ಪುರಸಭೆ ಅಧ್ಯಕ್ಷ ವಿನೋದ ಕರನಿಂಗ, ಉಪಾಧ್ಯಕ್ಷ ಯಲ್ಲಪ್ಪ ನಾಯಕ, ಸದಸ್ಯರಾದ ಪ್ರಕಾಶ ಕರನಿಂಗ, ಗುಳಪ್ಪ ಅಸೂದೆ, ಮಾರುತಿ ಪೂಜೇರಿ, ಅಶೋಕ ಕುಮಾರನಾಯಕ, ಧನ್ಯಕುಮಾರ ಮೇಗೆರಿ, ಸಾವಂತ ತಳವಾರ, ರಾಮಲಿಂಗ ಮಗದುಮ, ಮೇಘಾ ಪವಾರ, ಮುಖ್ಯಾಧಿಕಾರಿ ಎಸ್ ಎಮ್ ಹಿರೇಮಠ, ಇದ್ದರು.