ಗೋಕಾಕ:ರೈತರ ಸಹಕಾರದಿಂದ ಸತೀಶ ಶುರ್ಗಸ ಕಾರ್ಖಾನೆ ಪ್ರಗತಿ ಪಥದತ್ತ ಸಾಗುತ್ತಿದ್ದೆ : ಕಾರ್ಖಾನೆ ಎಂ.ಡಿ. ಸಿದ್ದಾರ್ಥ
ರೈತರ ಸಹಕಾರದಿಂದ ಸತೀಶ ಶುರ್ಗಸ ಕಾರ್ಖಾನೆ ಪ್ರಗತಿ ಪಥದತ್ತ ಸಾಗುತ್ತಿದ್ದೆ : ಕಾರ್ಖಾನೆ ಎಂ.ಡಿ. ಸಿದ್ದಾರ್ಥ
ಗೋಕಾಕ ಅ 23: ರೈತರ ಸಹಕಾರದಿಂದ ಸತೀಶ ಶುರ್ಗಸ ಲಿಮಿಟೆಡ್ ಕಾರ್ಖಾನೆಯು ಪ್ರಗತಿಪಥದತ್ತ ಸಾಗುತ್ತಿದ್ದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ವಾಡೆನ್ನವರ ಹೇಳಿದರು
ಸೋಮವಾರದಂದು ಸತೀಶ ಶುರ್ಗಸ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಆರ್ಥಿಕಾಭಿವೃದ್ಧಿಯಲ್ಲಿ ಸಕ್ಕರೆ ಕಾರ್ಖಾನೆಯ ಪಾತ್ರ ಹಿರಿದಾಗಿದೆ. ಸಹಕಾರಿ ತತ್ವದ ಆಧಾರದ ಮೇಲೆ ಸ್ಥಾಪಿತಗೊಂಡಿರುವ ಈ ಕಾರ್ಖಾನೆ ಜಿಲ್ಲೆಯಲ್ಲಿಯೇ ಮಾದರಿ ಕಾರ್ಖಾನೆಯಾಗಿದೆ. ಇದಕ್ಕೆ ರೈತರು ನೀಡುತ್ತಿರುವ ಸಹಕಾರವೇ ಕಾರಣವೆಂದು ಹೇಳಿದರು.
ಪ್ರಸಕ್ತ ಹಂಗಾಮಿನಲ್ಲಿ ಈ ಕಾರ್ಖಾನೆಗೆ ಕಬ್ಬನ್ನು ಪೂರೈಕೆ ಮಾಡಿ ಕಾರ್ಖಾನೆಯ ಅಭಿವೃದ್ಧಿಗೆ ಸಹಕರಿಸಬೇಕು. ಇದು ನಮ್ಮ ಕಾರ್ಖಾನೆ ಎಂಬ ಅಭಿಮಾನ ರೂಢಿಸಿಕೊಂಡು ಕಾರ್ಖಾನೆಯ ಪ್ರಗತಿಪಥಕ್ಕೆ ಕಾರಣೀಕರ್ತರಾಗಬೇಕೆಂದರು.
ಈ ಸಂದರ್ಭದಲ್ಲಿ ಪ್ರದೀಪ ಇಂಡಿ , ಎಲ್ .ಆರ್ ಕಾರಗಿ , ಪಿ.ಡಿ ಹಿರೇಮಠ , ರಾಜು ಧರಗಶೆಟ್ಟಿ , ಶ್ರೀಕಾಂತ್ ಭೂಶಿ , ಪಾಂಡು ಮನ್ನಿಕೇರಿ , ಜಿ.ಎ.ದೇಸಾಯಿ , ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ರೈತರಾದ ಅಜ್ಜಪ ಗೀರಡ್ಡಿ , ಮಹಾದೇವ ಪತ್ತಾರ, ಲಕ್ಷ್ಮಣಗೌಡ ಪಾಟೀಲ , ಮಹಾಂತೇಶ ಮಗದುಮ್ಮ , ಪ್ರಕಾಶ ಪತ್ತಾರ , ರಿಯಾಜ ಚೌಗಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು