ಗೋಕಾಕ:ಪ್ರಶಿಕ್ಷಾಣಾರ್ಥಿಗಳು ತಾವು ಪಡೆದ ತರಬೇತಿಯ ಸದುಪಯೋಗ ಪಡೆದು ಉತ್ತಮ ನಾಗರಿಕರಾಗಬೇಕು : ಡೆಪ್ಯುಟಿ ರಜಿಸ್ಟಾರ ಡಿ.ಕೆ.ಕಾಂಬ್ಳೆ

ಪ್ರಶಿಕ್ಷಾಣಾರ್ಥಿಗಳು ತಾವು ಪಡೆದ ತರಬೇತಿಯ ಸದುಪಯೋಗ ಪಡೆದು ಉತ್ತಮ ನಾಗರಿಕರಾಗಬೇಕು : ಡೆಪ್ಯುಟಿ ರಜಿಸ್ಟಾರ ಡಿ.ಕೆ.ಕಾಂಬ್ಳೆ
ಗೋಕಾಕ ಮಾ 24 : ಪ್ರಶಿಕ್ಷಾಣಾರ್ಥಿಗಳು ತಾವು ಪಡೆದ ತರಬೇತಿಯ ಸದುಪಯೋಗದಿಂದ ತಮ್ಮ ವೃತಿ ಜೀವನದಲ್ಲಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸಿ ದೇಶಕ್ಕೆ ಕೋಡುಗೆಯಾಗಿ ನೀಡುವಂತೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಡೆಪ್ಯುಟಿ ರಜಿಸ್ಟಾರ ಡಿ.ಕೆ.ಕಾಂಬ್ಳೆ ಹೇಳಿದರು.
ರವಿವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮದಿಂದ ಪ್ರಯತ್ನ ಶೀಲರಾಗಿ ಸಾಧರಕರಾಗಿರಿ ವೃತ್ತಿಯೊಂದಿಗೆ ಸಮಾಜಮುಖಿಯಾಗಿಯೂ ಕಾರ್ಯನಿರ್ವಹಿಸಿ ಈ ಸಂಸ್ಥೆ ಕಲಿಕೆಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಮುಂದೆ ಎಂಇಡಿ ಯಂತಹ ಉನ್ನತ ಕಾಲೇಜುಗಳನ್ನು ಪ್ರಾರಂಭಿಸಿ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವುದರೊಂದಿಗೆ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ, ಆಡಳಿತಾಧಿಕಾರಿ ಬಿ.ಕೆ.ಕುಲಕರ್ಣಿ, ಪ್ರಾಚಾರ್ಯರಾದ ಡಾ.ಐ.ಎಸ್.ಪವಾರ, ಡಾ.ಎ.ಬಿ.ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ನೀತಿನ ಚುನ್ನನವರ, ಶಿಲ್ಪಾ ಪಟ್ಟಗುಂಡಿ ಇದ್ದರು.