RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ನಾಳೆಯಿಂದ ಮೂರು ದಿನಗಳ ಕಾಲ ನಗರದಲ್ಲಿ ಸರಕಾರಿ ನೌಕರರಿಗೆ ಸ್ನೇಹಪೂರ್ವ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ಗೋಕಾಕ:ನಾಳೆಯಿಂದ ಮೂರು ದಿನಗಳ ಕಾಲ ನಗರದಲ್ಲಿ ಸರಕಾರಿ ನೌಕರರಿಗೆ ಸ್ನೇಹಪೂರ್ವ ಕ್ರಿಕೆಟ್ ಪಂದ್ಯಾವಳಿ ಆಯೋಜನೆ 

ನಾಳೆಯಿಂದ ಮೂರು ದಿನಗಳ ಕಾಲ ನಗರದಲ್ಲಿ ಸರಕಾರಿ ನೌಕರರಿಗೆ ಸ್ನೇಹಪೂರ್ವ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ಗೋಕಾಕ ಡಿ 22: ಇಲ್ಲಿನ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ವತಿಯಿಂದ ಶನಿವಾರ ದಿನಾಂಕ 22 ರಿಂದ 25 ರವರೆಗೆ ಮೂರು ದಿನಗಳ ಕಾಲ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಿನ ಸರಕಾರಿ ನೌಕರರಿಗಾಗಿ ಎ.ಆರ್.ಜೆ ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಸ್ನೇಹಪೂರ್ವ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಸ್ನೇಹಪೂರ್ವ ಕ್ರಿಕೆಟ್ ಪಂದ್ಯಾವಳಿಗೆ ಯುವ ಧುರೀಣ ಅಮರನಾಥ ಜಾರಕಿಹೊಳಿ ಚಾಲನೆ ನೀಡುವರು. ಅತಿಥಿಗಳಾಗಿ ತಹಶೀಲ್ದಾರ್ ಡಾ.ಮೊಹನ ಭಸ್ಮೆ ಸೇರಿದಂತೆ ಗೋಕಾಕ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ.
ಈ ಸ್ನೇಹಪೂರ್ವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಸರಕಾರಿ ನೌಕರರಿಗೆ ಮಾತ್ರ ಅವಕಾಶವಿದ್ದು, ಆಟಗಾರರು ತಮ್ಮ ಇಲಾಖೆಯ ಐಡಿ ಮತ್ತು ಕೆ.ಜಿ.ಆರ್.ಡಿ. ನಂಬರ ಕಡ್ಡಾಯವಾಗಿ ತೋರಿಸಬೇಕು. ಅಂತಿಮ ಪಂದ್ಯದಲ್ಲಿ ವಿಜೇತರಾದ ತಂಡಕ್ಕೆ ಮತ್ತು ರನ್ನರ ಆಫ್ ತಂಡಕ್ಕೆ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಗುವುದು ಎಂದು ಸ್ನೇಹ ಪೂರ್ವ ಪಂದ್ಯಾವಳಿ ಆಯೋಜಕರಾದ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: