RNI NO. KARKAN/2006/27779|Friday, February 13, 2026
You are here: Home » breaking news » ಬೆಳಗಾವಿ:ಹಾಲಿ ಶಾಸಕರು ಇಲ್ಲಾ , ಮಾಜಿ ಶಾಸಕರು ಇಲ್ಲಾ ಪುತ್ರನೊಂದಿಗೆ ಸೌಥ್ ಆಫ್ರಿಕಾಕ್ಕೆ ಹಾರಿದ ಸಚಿವ ಜಾರಕಿಹೊಳಿ

ಬೆಳಗಾವಿ:ಹಾಲಿ ಶಾಸಕರು ಇಲ್ಲಾ , ಮಾಜಿ ಶಾಸಕರು ಇಲ್ಲಾ ಪುತ್ರನೊಂದಿಗೆ ಸೌಥ್ ಆಫ್ರಿಕಾಕ್ಕೆ ಹಾರಿದ ಸಚಿವ ಜಾರಕಿಹೊಳಿ 

ಹಾಲಿ ಶಾಸಕರು ಇಲ್ಲಾ , ಮಾಜಿ ಶಾಸಕರು ಇಲ್ಲಾ ಪುತ್ರನೊಂದಿಗೆ ಸೌಥ್ ಆಫ್ರಿಕಾಕ್ಕೆ ಹಾರಿದ ಸಚಿವ ಜಾರಕಿಹೊಳಿ

ಬೆಳಗಾವಿ ನ 17 : ದಸರಾ ಸಂದರ್ಭದಲ್ಲಿ ಸಮಾನ ಮನಸ್ಕ ಶಾಸಕರೊಂದಿಗೆ ಮೈಸೂರು ಪ್ರವಾಸ ಕೈಗೊಳ್ಳುವುದಾಗಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ.
ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಪ್ರವೇಶಿಸಿದ್ದರಿಂದ ದಸರಾ ಪ್ರವಾಸವನ್ನು ಮೊಟಕುಗೊಳಿಸಿ, ಮುಂದೆ ಹಾಲಿ ಅಲ್ಲಾ ಮಾಜಿ ಶಾಸಕರೊಂದಿಗೆ ದುಬೈ ಪ್ರವಾಸ ಕೈಗೊಳ್ಳುವುದಾಗಿ ಮಾಧ್ಯಮಕ್ಕೆ ತಮ್ಮ ಹೇಳಿಕೆಯನ್ನು ನೀಡಿದ್ದರು. ಸಚಿವರ ಈ ಹೇಳಿಕೆಯೂ ಸಹ ರಾಜಕೀಯ ವಲಯದಲ್ಲಿ ಸದ್ದು ಮಾಡಿದ ಪರಿಣಾಮ ಖುದ್ದು ಡಿಕೆಶಿ ಬ್ರದರ್ಸ್ ಸಚಿವ ಸತೀಶ ಜಾರಕಿಹೊಳಿ ಅವರ ಮನೆಗೆ ಭೇಟಿನೀಡಿ ಮಾತುಕತೆ ನಡೆಸಿದ್ದರು. ಅಲ್ಲಿಗೆ ಪ್ರವಾಸದ ಬಗ್ಗೆ ಮೌನವಹಿಸಿದ್ದ ‌ಸಚಿವ ಸತೀಶ ಜಾರಕಿಹೊಳಿ ಅವರು ಶುಕ್ರವಾರದಂದು ಸಾಯಂಕಾಲ ಹಾಲಿಯೂ ಇಲ್ಲಾ ,ಮಾಜಿಯೂ ಇಲ್ಲಾ ಪುತ್ರ ರಾಹುಲ್ ಹಾಗೂ ಕೆಲ ಆಪ್ತರೊಂದಿಗೆ 5 ದಿನಗಳ ಸೌಥ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ.

Related posts: