RNI NO. KARKAN/2006/27779|Saturday, July 12, 2025
You are here: Home » breaking news » ಬೆಳಗಾವಿ:ಖಜಕಿಸ್ತಾನದಲ್ಲಿ ನಡೆದ ʼಐರನ್‌ ಮ್ಯಾನ್‌ʼ ಸ್ಪರ್ಧೆಯಲ್ಲಿ ಬೆಳಗಾವಿ ಪೊಲೀಸ್‌ ಅಧಿಕಾರಿಯೋರ್ವರ ಅಮೋಘ ಸಾಧನೆ .

ಬೆಳಗಾವಿ:ಖಜಕಿಸ್ತಾನದಲ್ಲಿ ನಡೆದ ʼಐರನ್‌ ಮ್ಯಾನ್‌ʼ ಸ್ಪರ್ಧೆಯಲ್ಲಿ ಬೆಳಗಾವಿ ಪೊಲೀಸ್‌ ಅಧಿಕಾರಿಯೋರ್ವರ ಅಮೋಘ ಸಾಧನೆ . 

ಖಜಕಿಸ್ತಾನದಲ್ಲಿ ನಡೆದ ʼಐರನ್‌ ಮ್ಯಾನ್‌ʼ ಸ್ಪರ್ಧೆಯಲ್ಲಿ ಬೆಳಗಾವಿ ಪೊಲೀಸ್‌ ಅಧಿಕಾರಿಯೋರ್ವರ ಅಮೋಘ ಸಾಧನೆ .

ಬೆಳಗಾವಿ ಜು 4 : ಖಜಕಿಸ್ತಾನ ರಾಷ್ಟ್ರದಲ್ಲಿ ನಡೆದ ಐರನ್‌ ಮ್ಯಾನ್‌ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಸರ್ಕಲ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಮೋಘ ಸಾಧನೆ ಮಾಡಿದ್ದಾರೆ. ಈಜು , ಸೈಕ್ಲಿಂಗ್‌ , ಓಟ ಹೀಗೆ ಮೂರು ವಿಭಾಗಗಳಲ್ಲಿ ಪಾರಮ್ಯ ಮೆರೆದ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ್‌ ಅವರು ಪೊಲೀಸ್‌ ಇಲಾಖೆ ಹೆಮ್ಮೆ ಪಡುವಂತಹ ಸಾಧನೆ ಮಾಡಿ ತೋರಿಸಿದ್ದಾರೆ.
ಈ ಮೂಲಕ ದೂರದ ಖಜಕಿಸ್ತಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ಅಧಿಕಾರಿಯ ಈ ಸಾಧನೆ ಭಾರೀ ಹೆಮ್ಮೆ ಪಡುವಂತೆ ಮಾಡಿದೆ. ಬೆಳಗಾವಿ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಅಧಿಕಾರಿಯ ಈ ಸಾಧನೆ ಕುರಿತು ಬೆಳಗಾವಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ್‌ ಟ್ವಿಟ್ಟರ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಐರನ್‌ ಮ್ಯಾನ್‌ʼ ಸಾಧನೆ ಹೀಗಿದೆಮೂಡಲಗಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿರುವ ಶ್ರೀಶೈಲ ಬ್ಯಾಕೋಡ್‌ ಅವರು ಖಜಕಿಸ್ತಾನದಲ್ಲಿ ನಡೆದ ‘ಐರನ್‌ ಮ್ಯಾನ್‌ʼ ಸ್ಪರ್ಧೆಯಲ್ಲಿ ವಿಶಿಷ್ಟ ಸಾಧನೆ ಮೆರೆದಿದ್ದಾರೆ. ಸ್ಪರ್ಧೆಯಲ್ಲಿ 3.8 ಕಿಲೋ ಮೀಟರ್ ಈಜು, 180 ಕಿಲೋ ಮೀಟರ್‌ ಸೈಕ್ಲಿಂಗ್​ನಲ್ಲಿ ಭಾಗವಹಿಸಿದ್ದು ಅಲ್ಲದೇ, 42 ಕಿಲೋ ಮೀಟರ್ ಓಟವನ್ನು 14‌ ಗಂಟೆ 30 ನಿಮಿಷಗಳಲ್ಲಿ ಪೂರ್ತಿಗೊಳಿಸಿ ‘ಐರನ್-ಮ್ಯಾನ್ʼ ಆಗಿ ಹೊರಹೊಮ್ಮಿದ್ದಾರೆ.

Related posts: