ಗೋಕಾಕ:ದಿನ ಬಳಕೆಯಲ್ಲಿ ಮಾತೃಭಾಷೆ ಕನ್ನಡವನ್ನು ಹೆಚ್ಚು ಉಪಯೋಗಿಸಿ : ಸಿ.ಬಿ.ಪಾಗದ ಸಲಹೆ

ದಿನ ಬಳಕೆಯಲ್ಲಿ ಮಾತೃಭಾಷೆ ಕನ್ನಡವನ್ನು ಹೆಚ್ಚು ಉಪಯೋಗಿಸಿ : ಸಿ.ಬಿ.ಪಾಗದ ಸಲಹೆ
ಗೋಕಾಕ ಮೇ 7 : ದಿನ ಬಳಕೆಯಲ್ಲಿ ಮಾತೃಭಾಷೆ ಕನ್ನಡವನ್ನು ಹೆಚ್ಚು ಉಪಯೋಗಿಸಿ ಮಕ್ಕಳಲ್ಲಿಯೂ ಮಾತೃಭಾಷೆಯ ಮಹತ್ವವನ್ನು ತಿಳಿಸುವಂತೆ ಮಯೂರ ಶಾಲೆಯ ಮುಖ್ಯೋಪಾಧ್ಯಾಯರಾದ ಸಿ.ಬಿ.ಪಾಗದ ಹೇಳಿದರು.
ಶನಿವಾರದಂದು ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಪರಿಷತ್ತಿನ 109ನೇ ಸಂಸ್ಥಾನ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಉಪನ್ಯಾಸ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಎಲ್ಲರೂ ಕೈ ಜೋಡಿಸಬೇಕು ಪ್ರಸಕ್ತ ಬದಲಾವಣೆಗಳ ಕುರಿತು ಸಾಹಿತಿಗಳು ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಭಾರತಿ ಮದಬಾಂವಿ, ಉಪನ್ಯಾಸಕ ಜಯಾನಂದ ಮಾದರ, ಗಣ್ಯರಾದ ಚಂದ್ರಶೇಖರ್ ಅಕ್ಕಿ, ಮಹಾಂತೇಶ ತಾವಂಶಿ, ಬಸವರಾಜ ಮುರಗೋಡ, ಜಯಶ್ರೀ ಚುನಮರಿ ಇದ್ದರು.
ಇದೇ ಸಂದರ್ಭದಲ್ಲಿ ಭಾವಯಾನ ಮಹಿಳಾ ವೇದಿಕೆ ಅಧ್ಯಕ್ಷೆ ಡಾ.ಮಹಾನಂದಾ ಪಾಟೀಲ, ಹಾಗೂ ಸಾಹಿತಿ ಡಾ.ಲಕ್ಷ್ಮಣ ಚೌರಿ ಅವರನ್ನು ಸತ್ಕರಿಸಿ, ಗೌರವಿಸಲಾಯಿತು.
