ಗೋಕಾಕ:ಸಿದ್ಧೇಶ್ವರ ಶ್ರೀಗಳು ವೈಕುಂಠ ಏಕಾದಶಿಯಂದೇ ಜ್ಞಾನದಲ್ಲಿ ಐಕ್ಯರಾಗಿ ಜನಮಾನಸದಲ್ಲಿ ಉಳಿದಿದ್ದಾರೆ : ಸುರೇಶ್ ಸನದಿ

ಸಿದ್ಧೇಶ್ವರ ಶ್ರೀಗಳು ವೈಕುಂಠ ಏಕಾದಶಿಯಂದೇ ಜ್ಞಾನದಲ್ಲಿ ಐಕ್ಯರಾಗಿ ಜನಮಾನಸದಲ್ಲಿ ಉಳಿದಿದ್ದಾರೆ : ಸುರೇಶ್ ಸನದಿ
ಗೋಕಾಕ ಜ 4 : ಅಭಿನವ ವಿವೇಕಾನಂದ ಎಂದೇ ಖ್ಯಾತರಾಗಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಸಂತ, ಭಕ್ತರ ಪಾಲಿನ ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ವೈಕುಂಠ ಏಕಾದಶಿಯಂದೇ ಜ್ಞಾನದಲ್ಲಿ ಐಕ್ಯರಾಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಶಾಸಕರ ಆಪ್ತ ಸಹಾಯಕ ಸುರೇಶ ಸನದಿ ಹೇಳಿದರು.
ಮಂಗಳವಾರದಂದು ನಗರದ ಶಾಸಕರ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಬಿಜೆಪಿ ಪಕ್ಷದಿಂದ ಆಯೋಜಿಸಿದ್ಧ ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಜ್ಞಾನ ಯೋಗಿಯಾಗಿದ್ದು ಸಿದ್ಧೇಶ್ವರ ಶ್ರೀಗಳು ತಮ್ಮ ಪ್ರವಚನದಿಂದ ಲಕ್ಷಾಂತರ ಜನರನ್ನು ಸ್ಮಜ್ಞಾನದತ್ತ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದವರು ಅಂತಹ ದೇವರನ್ನು ಕಳೆದುಕೊಂಡ ನಮ್ಮ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ಕಾಂತು ಎತ್ತಿನಮನಿ, ಲಕ್ಕಪ್ಪ ಮಾಳಗಿ, ಭರಮಪ್ಪ ಬಾನಸಿ, ಈರಣ್ಣ ಕಮತ, ಬಡಕಪ್ಪ ಪೂಜೇರಿ, ಸುರೇಶ ಮಾದರ, ಸುರೇಶ ಬೀರನಗಡ್ಡಿ, ಲಕ್ಕಪ್ಪ ಬಂಡಿ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಪ್ರಧಾನ ಕಾರ್ಯದರ್ಶಿ ವಿರೇಂದ್ರ ಎಕ್ಕೇರಿಮಠ ಸೇರಿದಂತೆ ಅನೇಕರು ಇದ್ದರು.