ಗೋಕಾಕ:ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಹಾಫೀಜ ಮುಲ್ಲಾ
ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಹಾಫೀಜ ಮುಲ್ಲಾ
ಗೋಕಾಕ ಅ 8: ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು ಎಂದು ಹಾಫೀಜ ಮದಾರಸಾಬ ಮುಲ್ಲಾ ಹೇಳಿದರು
ಅವರು ರವಿವಾರದಂದು ಇಲ್ಲಿಯ ಅಬ್ದುಲ್ ಕಲಾಂ ಹೈಸ್ಕೂಲ್ ಆವರಣದಲ್ಲಿ ಕರ್ನಾಟಕ ಮುಸ್ಲಿಂ ವಿಕಾಸ್ ಪರಿಷತ್ ಹಮ್ಮಿಕೊಂಡಿದ್ದ ಉಚಿತ ಸುನ್ನತೆ ಇಬ್ರಾಹಿಂ (ಖತನಾ) ಕ್ಯಾಂಪದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು
ಮಾನವ ಶಿಕ್ಷಣದ ಜೋತೆಗೆ ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಶೇಯೊಭಿವೃದಿಗೆ ಶ್ರಮಿಸಿದಾಗ ಮಾತ್ರ ಸಮಾಜವನ್ನು ಉತ್ತುಂಗಕ್ಕೆ ಒಯ್ಯಲು ಸಾಧ್ಯ ಆ ನೀಟ್ಟಿನಲ್ಲಿ ಸಮಾಜದ ಯುವಕರು ಕಾರ್ಯಪ್ರವೃತ ವಾಗಬೇಕು
ದೇಶಕ್ಕೆ ಮೊದಲ ಶಿಕ್ಷಣ ಸಚಿವರನ್ನು ನೀಡಿದ ಮುಸ್ಲಿಂ ಸಮುದಾಯ ಇಂದು ಶೈಕ್ಷಣಿಕವಾಗಿ ಹಿಂದುಳಿದಿರುವುದು ನಮ್ಮ ದೌರ್ಭಾಗ್ಯ , ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಿ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಎಂದು ಘಟ್ಟಿಗೋಳಿಸಬೇಕಾಗಿದೆ ಎಂದು ಹಾಫೀಜ ಮುಲ್ಲಾ ಹೇಳಿದರು
ಬೆಳಿಗ್ಗೆ 9 ಘಂಟೆಯಿಂದ ನಡೆದ ಶಿಬಿರದಲ್ಲಿ ಸಮಾರು 200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಶಿಭಿರದ ಸದುಪಯೋಗವನ್ನು ಪಡೆದುಕೊಂಡರು
ಈ ಸಂದರ್ಭದಲ್ಲಿ ನೂರಇಲಾಹಿ ಜಮಾದಾರ , ಮಿರಜನ ಡಾ. ಇಕ್ಬಾಲ್ ಶೇರಿಕಮಸಲತ್ , ಡಾ. ಇಸಾಕ ಔರಂಗವಾಲೆ , ಸೈಯದ ಮುಲ್ಲಾ , ಜಹಾಂಗೀರ ಜಮಾದಾರ , ಸಂಘಟನೆಯ ಪ್ರಮುಖ ಅಬ್ಬಾಸ ದೇಸಾಯಿ , ಸಾಧಿಕ ಹಲ್ಯಾಳ , ಪಧಾಧಿಕಾರಿಗಳಾದ ಖಾಜಾ ಮತ್ತೆ , ಅಬ್ಬು ಮುಜಾವರ , ರಫೀಕ ಗುಳೇದ್ದಗುಡ , ಮೋಶಿನ ಮಕಾಂನದಾರ , ಮಲೀಕ ಅತ್ತಾರ , ಇಮ್ರಾನ ಪೀರಜಾದೆ , ಮಹೆಬೂಬ ಶೀಲೆದಾರ , ಇಮ್ರಾನ ಪುಲತಾಂಬೆ , ಸೈಯದ ಪಠಾಣ , ಮೈಮೂದ ಮುಜಾವರ , ಅಜರೋದ್ದಿನ ಹೊಸಪೇಠ , ಹುಸೇನ ಕಲ್ಲೋಳಿ, ಸೋಹೆಲ ಸೇಯದ್ ,ಹಾರುಣ ಮತ್ತೆ , ಇರ್ಷಾದ್ ನೀರ್ಲಿ , ಮಲಿಕ್ ಅರಳಿಮಟ್ಟಿ , ಇಮ್ರಾನ ಚವ್ಹಾಣ , ಅಸ್ಲಂ ಹಯಾತಖಾನ , ಯನೂಸ ಸೈಯದ, ರಿಯಾಜ ಕಲ್ಲೋಳಿ, ಹಸನ ಕಲ್ಲೋಳಿ , ಸಮದ ಮುಜಾವರ , ಪೈಗಂಬರ ಮುಲ್ಲಾ, ದಾದಾಪೀರ ಪೀರಜಾದೆ ಸೇರಿದಂತೆ ಹಲವರು ಉಪಸ್ಥಿತರಿದ್ದರು