ಘಟಪ್ರಭಾ:ನಿಸ್ವಾರ್ಥ ಸಮಾಜಸೇವೆಯನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡು ಸಮಾಜ ಸೇವೆ ಮಾಡಿ: ಮೌಲಾನ ಸಜ್ಜಾದ ನೋಮಾನಿ

ನಿಸ್ವಾರ್ಥ ಸಮಾಜಸೇವೆಯನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡು ಸಮಾಜ ಸೇವೆ ಮಾಡಿ: ಮೌಲಾನ ಸಜ್ಜಾದ ನೋಮಾನಿ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 17 :
ನಿಸ್ವಾರ್ಥ ಸಮಾಜಸೇವೆಯನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡು ಸಮಾಜ ಸೇವೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗವುದು ಎಂದು ಮುಂಬೈನ ನೇರಲ್ ನ ಮೌಲಾನ ಶೇಖ ಖಲೀಲ್ ಉರ್ ರಹಮಾನ್ ಸಜ್ಜಾದ ನೋಮಾನಿ ಹೇಳಿದರು.
ಸೋಮವಾರದಂದು ಮಲ್ಲಾಪೂರ ಪಿ.ಜಿ.ಪಟ್ಟಣದಲ್ಲಿ ರಹಮಾನ್ ಪೌಂಡೇಶನ್ ವತಿಯಿಂದ ಬಡ ಜನರ ಅನುಕೂಲಕ್ಕಾಗಿ ನೂತನವಾಗಿ ಪ್ರಾರಂಭಿಸಲಾದ ನೋಮಾನಿ ಆಸ್ಪತ್ರೆಯನ್ನು ಸಸಿಗೆ ನೀರೆರೆಯುವ ಮೂಲಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಜಾತ್ಯತೀತವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೋಳ್ಳುವದರ ಜೊತೆಗೆ ಸೇವೆಯಲ್ಲಿ ಪಾರದರ್ಶಕತೆಯನ್ನು ಹೊಂದಬೇಕು. ನಮ್ಮ ಸಮಾಜ ಸೇವೆಯನ್ನು ಸಮುದಾಯ , ಸರಕಾರಗಳು, ಜನಪ್ರತಿನಿಧಿಗಳು ಗುರುತಿಸುವ ಕಾರ್ಯವಾಗಬೇಕು. ಕಳೆದ ಹಲವಾರು ದಶಕಗಳಿಂದ ದೇಶದ ಹಲವು ರಾಜ್ಯಗಳಲ್ಲಿ ರಹಮಾನ್ ಫೌಂಡೇಶನ್ ಬಡವ ಬಲ್ಲಿಗರ ಸೇವೆ ಮಾಡುತ್ತಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ನೋಮಾನಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ಈ ಆಸ್ಪತ್ರೆ ಜಿಲ್ಲೆಯಲ್ಲಿ ಎರಡನೇ ಆಸ್ಪತ್ರೆಯಾಗಿದ್ದು, ಮುಂಬರುವ ದಿನಗಳಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಆಸ್ಪತ್ರೆಗಗಳನ್ನು ತೆರೆಯುವ ಯೋಜನೆ ರಹಮಾನ್ ಪೌಂಡೇಶನ್ ಹೊಂದಿದೆ.
ನೂತನವಾಗಿ ಪ್ರಾರಂಭಿಸಲಾದ ಆಸ್ಪತ್ರೆಯಲ್ಲಿ ಪ್ರಸುತಿ ಮತ್ತು ಸ್ತ್ರೀ ರೋಗ, ಚಿಕ್ಕಮಕ್ಕಳು, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಚರ್ಮ ರೋಗ, ನೇತ್ರಕ್ಕೆ ಸಂಬಂಧಪಟ್ಟ ರೋಗಗಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುವುದು. ಐಸಿಯು ಸೌಲಭ್ಯದೊಂದಿಗೆ ಔಷಧಾಲಯ,ಪ್ರಯೋಗಾಲಯಗಳು 24×7 ಸೇವೆ ನೀಡಲಾಗುವುದು. ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಬೇಕು.
ಕೋವೀಡ ಸಂದರ್ಭದಲ್ಲಿ ರಹಮಾನ್ ಫೌಂಡೇಶನ್ ವತಿಯಿಂದ ಔಷಧಿ ಮತ್ತು ಅಗತ್ಯ ವಸ್ತುಗಳನ್ನು ಪ್ರಾಮಾಣಿಕವಾಗಿ ಸೇವೆ ಗೈಯಲಾಗಿದ್ದು, ಭಗವಂತನನ್ನು ಒಲಿಸಲು ಸಮಾಜ ಸೇವೆಯಾಗಬೇಕು ಹೊರತು ಜನರನ್ನು ಮೆಚ್ಚಿಸಲು ಅಲ್ಲ ಆ ದಿಸೆಯಲ್ಲಿ ಎಲ್ಲರೂ ಕೂಡಿ ಸಮಾಜ ಸೇವೆ ಮಾಡಿದಾಗ ಸುಭದ್ರ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಹಮಾನ್ ಪೌಂಡೇಶನ್ ನ ಮೌಲಾನ ಅಬ್ಬದುಲ್ಲಾ, ಮುಫ್ತಿ ಜುಬೇರ, ಮೌಲಾನಾ ಸಾಜೀದಸಾಬ, ಮೌಲಾನ ಆರೀಫ, ಸಲಿಮ್ ಲಂದೂರ, ಆತಿಕ್, ಮೌಲಾನಾ ಬಶೀರ, ಕಾರಿ ಯುನೂಸ್ ,ಮೌಲಾನ ಅಬ್ಬುಲ್ ರಹೀಮ ಪೂನಾ,ಮೌಲಾನಾ ಅಬೇದುಲ್ಲಾ, ಮುನ್ನಾ ಸೌದಾಗರ ಸೇರಿದಂತೆ ಅನೇಕರು ಇದ್ದರು.