ಗೋಕಾಕ:ಸೆಪ್ಟೆಂಬರ್ 15 ರಿಂದ 30 ರ ವರೆಗೆ ಶ್ವಾನಗಳಿಗೆ ಉಚಿತ ಮಿಷನ್ ರೇಬೀಸ್ ಕಾರ್ಯಕ್ರಮ : ಡಾ.ಮೋಹನ್ ಕಮತ

ಸೆಪ್ಟೆಂಬರ್ 15 ರಿಂದ 30 ರ ವರೆಗೆ ಶ್ವಾನಗಳಿಗೆ ಉಚಿತ ಮಿಷನ್ ರೇಬೀಸ್ ಕಾರ್ಯಕ್ರಮ : ಡಾ.ಮೋಹನ್ ಕಮತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 13 :
ತಾಲೂಕಿನಲ್ಲಿ ಸೆಪ್ಟೆಂಬರ್ 15 ರಿಂದ 30 ರ ವರೆಗೆ ಮಿಷನ್ ರೇಬೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ 15 ದಿನಗಳ ವರೆಗೆ ತಾಲೂಕಿನ ಎಲ್ಲಾ ಪಶು ವೈದ್ಯಕೀಯ ಸಂಸ್ಥೆಯಲ್ಲಿ ಉಚಿತವಾಗಿ ಶ್ವಾನಗಳಿಗೆ ರೇಬೀಸ್ ಲಸಿಕೆಗಳನ್ನು ನೀಡಲಾಗುವುದು, ತಾಲೂಕಿನ ಎಲ್ಲಾ ಶ್ವಾನ ಮಾಲೀಕರು ತಮ್ಮ ತಮ್ಮ ಶ್ವಾನಗಳಿಗೆ ಸಮೀಪದ ಪಶು ವೈದ್ಯಕೀಯ ಸಂಸ್ಥೆಗಳಿಗೆ ಕರೆದುಕೊಂಡು ಹೋಗಿ ರೇಬೀಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .