ಗೋಕಾಕ:ತಾಯಿ ತಂದೆ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಅದನ್ನು ಪಡೆದು ಸುಂದರ ಬದುಕನ್ನು ರೂಪಿಸಿಕೊಳ್ಳಿ : ಎ.ವೈ ಪಂಗನ್ನವರ
ತಾಯಿ ತಂದೆ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಅದನ್ನು ಪಡೆದು ಸುಂದರ ಬದುಕನ್ನು ರೂಪಿಸಿಕೊಳ್ಳಿ : ಎ.ವೈ ಪಂಗನ್ನವರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 23 :
ಜ್ಞಾನವೇ ದೇವರು, ತಾಯಿ ತಂದೆ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಅದನ್ನು ಪಡೆದು ಸುಂದರ ಬದುಕನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ಪ್ರಾಧ್ಯಾಪಕ ಎ ವೈ ಪಂಗನ್ನವರ ಹೇಳಿದರು.
ಶನಿವಾರದಂದು ನಗರದಲ್ಲಿ ಜೆಎಸ್‍ಎಸ್ ಕಾಲೇಜಿನ 1992ನೇ ಸಾಲಿನ ಬಿ.ಕಾಂ ಬ್ಯಾಚನ ವಿದ್ಯಾರ್ಥಿಗಳು ಹಮ್ಮಿಕೊಂಡ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಶಿಕ್ಷಣ ವ್ಯಕ್ತಿತ್ವವನ್ನು ವಿಕಸನಗೊಳಿಸಿ ನೆಮ್ಮದಿಯ ಬದುಕನ್ನು ಕೊಡುತ್ತದೆ. ಶಿಕ್ಷಣದಿಂದ ಉತ್ತಮ ಸಂಸ್ಕಾರ ಹೊಂದಿ ಸ್ವಾವಲಂಭಿಗಳಾಗಿ ಬದುಕಬಹುದು. ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ನೀಡಿದ ಭಾರತ ದೇಶದ ಉತ್ತಮ ನಾಗರಿಕರಾಗಿ ಆ ಪರಂಪರೆಯನ್ನು ಮುಂದುವರೆಸುತ್ತಿರುವದು ಮಾದರಿಯಾಗಿದೆ. ನೀವೆಲ್ಲ ಸಮೃದ್ಧ ಬದುಕಿನೊಂದಿಗೆ ಆಧ್ಯಾತ್ಮೀಕ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನಿಮ್ಮ ಮಕ್ಕಳನ್ನು ಸಂಸ್ಕಾರ ವಂತರಾಗಿ ಮಾಡುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ಪ್ರಾಧ್ಯಾಪಕುಗಳಾದ ಜಿ ಬಿ ಮಮದಾಪೂರ, ಸಿ ಆರ್ ಅರಳಿಮಟ್ಟಿ, ಡಾ. ಸಿ ಕೆ ನಾವಲಗಿ, ಜಿ ಬಿ ಯಲಗಟ್ಟಿ, ಶ್ರೀಮತಿ ಸಾವಗಾಂವಿ, ಜಿ ಬಿ ಮಳಗಿ, ಎಸ್ ಸಿ ಕಟಾವಳಿಮಠ ಹಾಗೂ ಪ್ರಕಾಶ ಕೋಲಾರ, ರಾಜು ಹಡಗಿನಾಳ ಇದ್ದರು.
ಮಿಲಿಂದ ಕುಲಕರ್ಣಿ ಸ್ವಾಗತಿಸಿದರು, ಶೈಲಾ ಕೊಕ್ಕರಿ ನಿರೂಪಿಸಿದರು, ಸುನೀಲ ಮುದ್ರಬೆಟ್ಟ ವಂದಿಸಿದರು.