ಗೋಕಾಕ:ಮಗುವಿಗೆ ತಾಯಿಯೇ ಮೊದಲ ಗುರು : ಸಿ.ಬಿ.ಪಾಗದ ಅಭಿಮತ
ಮಗುವಿಗೆ ತಾಯಿಯೇ ಮೊದಲ ಗುರು : ಸಿ.ಬಿ.ಪಾಗದ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 13 :
ಮಗುವಿಗೆ ತಾಯಿಯೇ ಮೊದಲ ಗುರುವಾಗಿದ್ದು, ತಾಯಿಯನ್ನು ಪೂಜಿಸಿ ಗೌರವಿಸುವಂತ ಸಂಸ್ಕಾರವನ್ನು ಬೆಳೆಸುವಂತೆ ಮುಖ್ಯೋಪಾಯನಿ ಸಿ.ಬಿ.ಪಾಗದ ಹೇಳಿದರು.
ಬುಧವಾರದಂದು ನಗರಧ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮ ನಿಮಿತ್ತ ಎಲ್.ಕೆ.ಜಿ.ಮತ್ತು ಯುಕೆಜಿ ವಿದ್ಯಾರ್ಥಿಗಳಿಂದ ತಾಯಂದಿರ ಪಾದಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸರ್ವಾಂಗೀಣ ಬೆಳೆವಣಿಗೆಯಲ್ಲಿ ತಾಯಿಯ ಪಾತ್ರ ಮಹತ್ವದಾಗಿದೆ. ಮಗುವಿನ ಪೋಷಣೆಯೊಂದಿಗೆ ಶಿಕ್ಷಣ, ಸಂಸ್ಕಾರವನ್ನು ನೀಡಿ ಉತ್ತಮ ನಾಗರಿಕರನ್ನಾಗಿ ದೇಶಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಇಂತಹ ಮಹತ್ವ ಕಾರ್ಯ ಮಾಡುತ್ತಿರುವ ತಾಯಂದಿರನ್ನು ಗೌರವಿಸುವ ಸಂಸ್ಕಾರವನ್ನು ಇಂದಿನ ಮಕ್ಕಳಲ್ಲಿ ಬೆಳೆಸುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಂ.ಸಿ.ವಣ್ಣೂರ, ಶಂಭುಲಿಂಗ ಕೋಳದುರ್ಗಿ ಹಾಗೂ ಶಿಕ್ಷಕರು ,ತಾಯಂದಿರು ಪಾಲ್ಗೊಂಡಿದ್ದರು.
Related posts:
ಘಟಪ್ರಭಾ:ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೆ ವಿದ್ಯಾಥಿಗಳು ಯಶಸ್ಸು ಗಳಿಸಲು ಸಹಕಾರಿ : ಶಿಕ್ಷಣಾಧಿಕಾರಿ ಜಿ.ಬಿ….
ಗೋಕಾಕ:ಯಶವಂತಪುರ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಗೋಕಾಕಿನ ಕ್ಯಾಂಟರ್ : ಇಬ್ಬರಿಗೆ ಗಂಭೀರ ಗಾಯ ಚಾಲಕನ ಸ್ಥಿತಿ ಚಿಂತಾಜನ…
ಗೋಕಾಕ:ನೆರೆ ಪೀಡಿತರಿಗೆ ಆಹಾರ ಇಲಾಖೆಯ ವೆಬ್‍ಸೈಟ್ ಕಿರಿಕಿರಿ : ಪಡಿತರ ಚೀಟಿಯ ನಕಲು ಪಡೆಯಲು ಪರದಾಡುತ್ತಿರುವ ಜನರು