ಗೋಕಾಕ:ಮಾನವರ ಬದುಕಿಗೆ ಪರಿಸರ ಮಹತ್ವದ ಪಾತ್ರ ವಹಿಸಿದೆ : ಸತೀಶ್ ನಾಡಗೌಡ
ಮಾನವರ ಬದುಕಿಗೆ ಪರಿಸರ ಮಹತ್ವದ ಪಾತ್ರ ವಹಿಸಿದೆ : ಸತೀಶ್ ನಾಡಗೌಡ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 12 :
ಮಾನವರ ಬದುಕಿನಲ್ಲಿ ಪರಿಸರ ಮಹತ್ವದ ಪಾತ್ರ ವಹಿಸಿದ್ದು , ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಸತೀಶ್ ನಾಡಗೌಡ ಹೇಳಿದರು.
ಮಂಗಳವಾರದಂದು ನಗರದ ಜೆಎಸ್ಎಸ್. ಕಾಲೇಜ ಆವರಣದಲ್ಲಿ ರೋಟರಿ ಹಾಗೂ ಇನರವ್ಹಿಲ್ ಸಂಸ್ಥೆಗಳು, ಅರಣ್ಯ ಇಲಾಖೆ , ಗೋಕಾಕ ಶಿಕ್ಷಣ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ರಕ್ಷಣೆಯಿಂದ ಪ್ರಕೃತಿ ವಿಕೋಪಗಳನ್ನು ತಡೆಗಟ್ಟಬಹುದು. ಆರೋಗ್ಯವಂತ ಬದುಕಿಗೆ ಪರಿಸರ ಸಹಕಾರಿಯಾಗಿದೆ. ಸಸಿ ನೆಡುವ ಮೂಲಕ ಅರಣ್ಯವನ್ನು ಹೆಚ್ಚು ಬೆಳೆಸಿ ಪರಿಸರ ರಕ್ಷಣೆಗೆ ನಾವೆಲ್ಲ ಕೈ ಜೋಡಿಸುಣಾ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶೂನಾಥ್ ಕಡಕೋಳ, ರೋಟರಿ ಸಂಸ್ಥೆಯ ಸೋಮಶೇಖರ್ ಮಗದುಮ್ಮ, ರಾಜು ವರದಾಯಿ, ದಿಲೀಪ್ ಮೆಳವಂಕಿ, ಮಹಾಂತೇಶ ತಾಂವಶಿ, ಸಚನ್ ಜಾಧವ್, ಪುಂಡಲೀಕ ವಣ್ಣೂರ, ಮಲ್ಲಿಕಾರ್ಜುನ ಈಟಿ , ಇನರವ್ಹಿಲ್ ಸಂಸ್ಥೆಯ ಅಧ್ಯಕ್ಷೆ ಆರತಿ ನಾಡಗೌಡ, ಸತೀಶ್ ಬೆಳಗಾವಿ, ಗಿರೀಜಾ ಮುನ್ನೋಳಿಮಠ, ಅನಸೂಯಾ ದುಳಾಯಿ, ವಿದ್ಯಾ ಗುಲ್, ಡಾ.ಸರಳಾ ಕಪ್ಪಲಗುದ್ದಿ, ಅರಣ್ಯ ಇಲಾಖೆಯ ರಾಜೇಶ್ವರಿ ಈರನಟ್ಟಿ, ಕೆ.ಎನ್.ವಣ್ಣೂರ, ಗೋಕಾಕ ಶಿಕ್ಷಣ ಸಂಸ್ಥೆಯ ಆರ್.ಎಂ ವಾಲಿ, ಡಾ.ಎ.ಎಸ್.ತೇರದಾಳ ಸೇರಿದಂತೆ ಅನೇಕರು ಇದ್ದರು.