RNI NO. KARKAN/2006/27779|Wednesday, August 6, 2025
You are here: Home » breaking news » ಗೋಕಾಕ:ಪೊಲೀಸರ ಸರ್ಪಗಾವಲಿನ ಮಧ್ಯೆಯೂ ನಿಲ್ಲದ ಪ್ರವಾಸಿಗರ ತುಂಟಾಟ : ಜಲಾಶಯ ನೋಡಲು ಹರಿದು ಬರುತ್ತಿರುವ ಜನಸಾಗರ

ಗೋಕಾಕ:ಪೊಲೀಸರ ಸರ್ಪಗಾವಲಿನ ಮಧ್ಯೆಯೂ ನಿಲ್ಲದ ಪ್ರವಾಸಿಗರ ತುಂಟಾಟ : ಜಲಾಶಯ ನೋಡಲು ಹರಿದು ಬರುತ್ತಿರುವ ಜನಸಾಗರ 

ಪೊಲೀಸರ ಸರ್ಪಗಾವಲಿನ ಮಧ್ಯೆಯೂ ನಿಲ್ಲದ ಪ್ರವಾಸಿಗರ ತುಂಟಾಟ : ಜಲಾಶಯ ನೋಡಲು ಹರಿದು ಬರುತ್ತಿರುವ ಜನಸಾಗರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 11 :

ಸತತ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಗೋಡಚಿನಮಲ್ಕಿ ಜಲಾಶಯ ರಮಣೀಯವಾಗಿ ಹರಿಯುತ್ತಿರುವದು.

ಸತತವಾಗಿ ಹರಿಯುತ್ತಿರುವ ಮಳೆಯಿಂದ ತಾಲೂಕಿನ ಗೋಕಾಕ ಫಾಲ್ಸ್ ಮತ್ತು ಗೋಡಚಿನಮಲ್ಕಿ ಜಲಾಶಯಗಳು ರಮಣೀಯವಾಗಿ ಹರಿಯುತ್ತಿದ್ದು, ಜಲಾಶಯಗಳನ್ನು ನೋಡಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.

ಬೆಳೆಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಈ ಎರೆಡು ಜಲಪಾತಗಳು ಜಗತ್ತ ಪ್ರಸಿದ್ಧಿ ಗಿಟ್ಟಿಸಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿವೆ.

ಪ್ರವಾಸಿಗರು ತೀರದಲ್ಲಿ ಹೋಗದಿರುವಂತೆ ಗೋಡಚಿನಮಲ್ಕಿಯಲ್ಲಿ ಯಮಕನಮರಡಿ ಪೊಲೀಸರು ಬ್ಯಾರಿಗೇಟ್ ಹಾಕಿರುವುದು

ಎರೆಡು ತಾಣಗಳಲ್ಲಿಗೆ ಪೊಲೀಸ್ ಸರ್ಪಗಾವಲು : ಕೆಳೆದ ಒಂದು ವಾರದಿಂದ ಸಯ್ಯಾದ್ರಿ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಜಲಪಾತಗಳು ರಮಣೀಯವಾಗಿ ದುಮುಕುತ್ತಿವೆ.ಇದನ್ನು ನೋಡಲು ರಾಜ್ಯ ಹಾಗೂ ಹೊರ ರಾಜ್ಯದಿಂದ ಸಮುದ್ರೋಪಾಯವಾಗಿ ಪ್ರವಾಸಿಗರು ಹರಿದು ಬರುತ್ತಿದ್ದು, ಪ್ರವಾಸಿಗರ ತುಂಟಾಟ ನಿಲ್ಲದಾಗಿದೆ. ಹೆಚ್ಚಿನ ಪ್ರವಾಸಿಗರು ‌ಸೆಲ್ಫೀ ತಗೆದು ಕೊಳ್ಳಲು ಜಲಾಶಯಗಳ ಅಂಚಿನಲ್ಲಿ ಹೋಗುತ್ತಿರುವ ಕಾರಣ ಅವರ ಸುರಕ್ಷತೆಗಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಫಾಲ್ಸ್ ಮತ್ತು ಗೋಡಚಿನಮಲ್ಕಿ ಜಲಾಶಯಗಳಲ್ಲಿ ಸಿಬ್ಬಂದಿಗಳನ್ನು ನೇಮಿಸಿದ್ದಾರೆ . ಎಸ್.ಪಿ. ಡಾ.ಸಂಜೀವ ಪಾಟೀಲ ಅವರು ಗೋಕಾಕ ಪಾಲ್ಸ್ ಜಲಪಾತಕ್ಕೆ ಬೇಟಿ ನೀಡಿದ ನಂತರ ಕಳೆದ ಎರಡು ದಿನಗಳಿಂದ ಈ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಕಾವಲು ಕಾಯುತ್ತಿದ್ದಾರೆ. ನಮ್ಮ ಜೀವ ರಕ್ಷಿಸಲು ಪೊಲೀಸರು ಹಗಲಿರುಳು ಶ್ರಮ ವಹಿಸಿ ಈ ಪ್ರದೇಶಗಳಲ್ಲಿ ಕಾವಲು ಕಾಯುತ್ತಿದ್ದರು ಸಹ ಪ್ರವಾಸಿಗರು ಪೊಲೀಸ್ ಸಿಬ್ಬಂದಿಯರ ಕಣ್ಣತಪ್ಷಿಸಿ ತಾಲೂಕಿನ ಗೋಡಚಿನಮಲ್ಕಿಯಲ್ಲಿ ಜಲಾಶಯದ ಅಂಚಿನಲ್ಲಿ ನಿಂತು ಪೋಟೋಗೆ ಪೋಸ್ ನೀಡಿ ಪೊಲೀಸರ ಕಾರ್ಯವೈಖರಿಯನ್ನು ಅಣುಕಿಸುತ್ತಿದ್ದಾರೆ. ತಮ್ಮ ಜೀವದ ಕಾಳಜಿ ಮಾಡದೆ ಜಲಾಶಯಗಳ ಕಣ್ಣತುಂಬಿ ಕೊಳ್ಳಲು ಬರುತ್ತಿರುವ ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುತ್ತಿದ್ದರು ಸಹ ಪ್ರವಾಸಿಗರು ಅವರ ನಿಯಂತ್ರಣ ಮೀರಿ ವರ್ತಿಸುತ್ತಿರುವದು ಸರಿಯಾದ ಕ್ರಮ ವಲ್ಲ . ಜಲಪಾತ ನೋಡಲು ಬರುವ ಪ್ರವಾ‌ಸಿಗರು ಪೊಲೀಸರಿಗೆ ಸಹಕಾರ ಕೊಟ್ಟು ಅತ್ಯಂತ ಜಾಗೃಕತೆಯಿಂದ ಜಲಪಾತವನ್ನು ವಿಕ್ಷೀಸಬೇಕೆಂದು ಗೋಡಚಿನಮಲ್ಕಿ ಜಲಾಶಯ ಪ್ರದೇಶದಲ್ಲಿ ಕಾವಲು ಕಾಯುತ್ತಿರುವ ಯಮಕನಮರಡಿ ಠಾಣೆಯ ಪೊಲೀಸ ಸಿಬ್ಬಂದಿಗಳು ಪ್ರವಾಸಿಗರಲ್ಲಿ ವಿನಂತಿಸುತ್ತಿದ ದೃಶಗಳು ಕಾಣ ಸಿಗುತ್ತವೆ.

ಪ್ರವಾಸಿಗರು ಜಲಾಶಯ ನೋಡಲು ಕೆಳಗೆ ಇಳಿಯಂದೆ ಗೋಡಚಿನಮಲ್ಕಿ ಜಲಪಾತದ ಎತ್ತರ ಪ್ರದೇಶದಲ್ಲಿ ಕಾವಲಿಗೆ ನಿಂತಿರುವ ಯಮಕನಮರಡಿ ಠಾಣೆಯ ಪೊಲೀಸ್ ಸಿಬ್ಬಂದಿ

Related posts: