RNI NO. KARKAN/2006/27779|Tuesday, February 17, 2026
You are here: Home » breaking news » ಘಟಪ್ರಭಾ:ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ : ಶೌಚಾಲಯ ಗುಂಡಿ ತೆಗೆದು ಜಾಗೃತಿ ಮೂಡಿಸಿದ ಗ್ರಾ.ಪಂ ಅಧ್ಯಕ್ಷ

ಘಟಪ್ರಭಾ:ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ : ಶೌಚಾಲಯ ಗುಂಡಿ ತೆಗೆದು ಜಾಗೃತಿ ಮೂಡಿಸಿದ ಗ್ರಾ.ಪಂ ಅಧ್ಯಕ್ಷ 

ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ : ಶೌಚಾಲಯ ಗುಂಡಿ ತೆಗೆದು ಜಾಗೃತಿ ಮೂಡಿಸಿದ ಗ್ರಾ.ಪಂ ಅಧ್ಯಕ್ಷ

ಘಟಪ್ರಭಾ ಸೆ 29: ಸ್ವಚ್ಛ ಬಾರತ ಮಿಶನ್ ಅಂಗವಾಗಿ ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ ಸಮಾರಂಭವು ಸಮೀಪದ ಧುಪದಾಳ ಗ್ರಾಮದಲ್ಲಿ ಗುರುವಾರದಂದು ಜರುಗಿತು.

ಧುಪಾದಾಳ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಜಾಥಾ ನಡೆಸಿ ಜನತಾ ಪ್ಲಾಟದಲ್ಲಿಯ ಪ್ರತಿಯೂಂದು ಮನೆಗೆ ಹೋಗಿ ಶೌಚಾಲಯ ಹೊಂದಿರದ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ತಿಳಿಸಿದರು ಅಲ್ಲದೆ 102 ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳ ಗುರಿತಿಸಿ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್.ಆಯ್.ಬೆನವಾಡೆ, ತಾ.ಪಂ ಸದಸ್ಯ ಲಗಮಣ್ಣ ನಾಗಣ್ಣವರ, ಗ್ರಾ.ಪಂ ಸದಸ್ಯ ಪ್ರಕಾಶ ಡಾಂಗೆ, ಕಲ್ಲಪ್ಪ ಸನದಿ, ರಾಜಶೇಖರ ರಜಪೂತ, ವಿನಯ ಜಾದವ, ಕಲ್ಲೋಳ್ಳಿ ಗಾಡಿವಡ್ಡರ, ಹಿರಿಯರಾದ ಡಿ.ಎಮ್.ದಳವಾಯಿ. ಸುಧೀರ ಜೋಡಟ್ಟಿ, ಮದಾರಸಾಬ ಜಗದಾಳೆ, ಹಣಮಂತ ಗಾಡಿವಡ್ಡರ, ಪಿ.ಡಿ.ಓ ಎಸ್.ಎಚ್.ದೇಸಾಯಿ, ಸಿಬ್ಬಂದಿಗಳಾದ ಸುಭಾಶ ತೆಳಗೇರಿ, ಮಹಾಂತೇಶ ದೊಡ್ಡಲಿಂಗಪ್ಪಗೋಳ, ಇರ್ಶಾದ ಜಗದಾಳೆ, ಮುಂತಾದವರು ಇದ್ದರು.

Related posts: